ಈ ಬಾರಿಯ ಚುನಾವಣೆ ಕೌಟುಂಬಿಕ ರಾಜಕಾರಣ ಮತ್ತು ಪ್ರಜಾಪ್ರಭುತ್ವ ನಡುವಿನ ಸಂಘರ್ಷ: ಕೋಟ ಶ್ರೀನಿವಾಸ ಪೂಜಾರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕನಕಪುರದ ಹಣಬಲದ ಬುಗರಿ ಆಟ ದ.ಕ ಜಿಲ್ಲೆಯ ನಾರಾಯಣ ಗುರುಗಳ ಈ ನೆಲದಲ್ಲಿ ಪ್ರಥಮ ಸೋಲು ಕಾಣಲಿದೆ…
“ಕೋಟ ಪೂಜಾರಿ…”

ಬೆಳ್ತಂಗಡಿ: ಈ ಚುನಾವಣೆಯಲ್ಲಿ ಒಂದುಕಡೆ ದೇವೇಗೌಡ, ಲಲ್ಲೂಪ್ರಸಾದ್ ಯಾದವ್, ಸೋನಿಯಾ ಗಾಂಧಿ ಮೊದಲಾದ ಕೌಟುಂಬಿಕ ರಾಜಕಾರಣದ ಮಹಾಘಟ ಬಂಧನ್, ಇನ್ನೊಂದು ಕಡೆ ಪ್ರಜಾಪ್ರಭುತ್ವದ ಸೊಬಗಿನ ನರೇಂದ್ರ ಮೋದೀಜಿಯವರು. ಇವರ ಮಧ್ಯೆ ಈ ಚುನಾವಣೆಯಲ್ಲಿ ಈ ಚುನಾವಣೆಯಲ್ಲಿ ದೇಶದಲ್ಲಿ ಕೌಟುಂಬಿಕ ರಾಜಕಾರಣ ಮತ್ತು ಪ್ರಜಾಪ್ರಭುತ್ವ ನಡುವೆ ಸಂಘರ್ಷ ಏರ್ಪಟ್ಟಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಳ್ತಂಗಡಿ ಪತ್ರಿಕಾಭವನದಲ್ಲಿ ಏ. 2 ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಭಾಗೀಯ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಯುವಮೋರ್ಚಾ ಅಧ್ಯಕ್ಷ ಸಂಪತ್ ಬಿ ಸುವರ್ಣ, ಕಾರ್ಯದರ್ಶಿ ನಾರಾಯನ್ ಆಚಾರ್, ಮಾಧ್ಯಮ ಪ್ರಮುಖ್ ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.

“ನಮ್ಮ ಸಂಸಾರ…ಕರ್ನಾಟಕ ಸರಕಾರ”
ರಾಜ್ಯದಲ್ಲಿ ಒಂದು ಕಡೆ ಪ್ರಧಾನಿಯಾಗಿದ್ದ ದೇವೇ ಗೌಡರು ಮಾರ್ಗದರ್ಶನ, ಪುತ್ರ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೊರ್ವ ಪುತ್ರ ರೇವಣ್ಣ ಪ್ರಭಾವಿ ಸಚಿವರಾಗಿದ್ದಾರೆ. ಬೀಗ ನಾಡೇಗೌಡ ಕೆಎಸ್‌ಆರ್‌ಟಿಸಿ ಮಂತ್ರಿ, ಕುಮಾರ ಸ್ವಾಮಿ ಅವರ ಪತ್ನಿ ಶಾಸಕಿಯಾಗಿದ್ದಾರೆ. ಅಣ್ಣನ ಹೆಂಡತಿ ಜಿ.ಪಂ ಸದಸ್ಯೆ, ಅಧ್ಯಕ್ಷೆ ಇತ್ಯಾಧಿಯಾಗಿದ್ದಾರೆ. ಇನ್ನೂ ಮುಂದುವರಿದು ಇದೀಗ ಹಾಸನದಲ್ಲಿ ರೇವಣ್ಣ ಪುತ್ರ, ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅಂತೂ ನಮ್ಮ ರಾಜ್ಯದಲ್ಲಿ ಜನ ಊಹಿಸಲಾಗದಂತ ನಾಟಕ ಕಂಪೆನಿ ಪಾರಕಾಷ್ಟೆ ನೋಡುವ ಅವಕಾಶ ರಾಜ್ಯದ ಜನತೆಗೆ ಬಂದಿದೆ. ಕೆಲವೊಂದು ಕಡೆ ಅವರೊಳಗೇ ಹೊಂದಾಣಿಕೆ ಇಲ್ಲದ ಸ್ಥಿತಿಯೂ ಬಹಿರಂಗ ಗೊಂಡಿದೆ. ಅಂತೂ ರಾಜ್ಯದಲ್ಲಿ “ನಮ್ಮ ಸಂಸಾರ ….ಕರ್ನಾಟಕ ಸರಕಾರ….” ಎಂಬಂತಾಗಿದೆ.

ಮೋದಿ ಅಡಳಿತದಲ್ಲಿ ದೇಶದಲ್ಲೇ ಕೋಮುಗಲಭೆ ಆಗಿಲ್ಲ:
ಮೋದೀಜಿಯವರ 5 ವರ್ಷದ ಆಡಳಿತದಲ್ಲಿ ದೇಶದಲ್ಲೇ ಕೋಮುಗಲಭೆಯಾಗಿಲ್ಲ, ರಾಷ್ಟ್ರದ ಅಭಿವೃದ್ದಿ ಬಿಟ್ಟರೆ ಯಾರಿಗೂ ಈ ಸರಕಾರ ತೊಂದರೆಕೊಟ್ಟಿಲ್ಲ, ಅಲ್ಪಸಂಖ್ಯಾತ ಸಮುದಾಯಸ್ತರೂ ಕೂಡ ಮೋದಿ ಸರಕಾರದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದು ದೇಶಕ್ಕೊಬ್ಬ ಸಮರ್ಥ ನಾಯಕ ಬೇಕಾಗಿದೆ ಎಂದು ಅಭಿಪ್ರಾಯವಿದೆ. ಮೇ. ೨೩ ರಂದು ಈ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆಬಂದು ಮೋದಿ ಯವರು ಮತ್ತೆ ಪ್ರಧಾನಿಯಾಗುತ್ತಾರೆ, ಬಲಿಷ್ಠ ಭಾರತಕ್ಕಾಗಿ ಮೋದೀಜಿಯವರೇ ಬೇಕು ಎಂದು ಇಲ್ಲಿರುವ ಸೈನಿಕರು, ಅನಿವಾಸಿ ಭಾರತೀಯರು, ರಿಕ್ಷಾ-ಟ್ಯಾಕ್ಸಿ ಚಾಲಕರು ಎಲ್ಲ ವರ್ಗದ ಜನರು ಬಯಸುತ್ತಿದ್ದಾರೆ ಎಂದರು.

ಸಿದ್ದು ಅಹಂಕಾರದ ಅಡಳಿತಕ್ಕೆ23 ಹಿಂದೂ ಕಾರ್ಯಕರ್ತರ ಬಲಿ:
ಸಿದ್ದು ಸರಕಾರದ ಅಹಂಕಾರದ ಆಡಳಿತದಲ್ಲಿ ಜಿಲ್ಲೆಯಲ್ಲಿ 23 ಮಂದಿ ಬಿಜೆಪಿ ಕಾರ್ಯಕರ್ತರನ್ನು ಕೊಚ್ಚಿ ಧಾರುಣವಾಗಿ ಕೊಲೆ ಮಾಡಲಾಗಿತ್ತು. ಇನ್ನೂ ಅವರಿಗೆ ರಕ್ತದಾಹ ತೀರಿಲ್ಲವೇ ಎಂದು ಮರುಪ್ರಶ್ನೆ ಕೇಳುತ್ತಿದ್ದೇವೆ. ಮುಖ್ಯಮಂತ್ರಿಗಳು ಮಂಡ್ಯದಲ್ಲಿ ಸುಮಲತಾರನ್ನು ಎದುರಿಸಲಾಗದೆ ಅವರ ವಿರುದ್ಧ ೩ ಮಂದಿ ಸುಮಲತಾರನ್ನು ನಿಲ್ಲಿಸಿ ಜೆಡಿಎಸ್ ರಣಹೇಡಿತನ ಪ್ರದರ್ಶಿಸಿದೆ. ಜೊತೆಗೆ ಜಾತ್ಯಾತೀತ ಪಕ್ಷ ಎಂದುಕೊಳ್ಳುವ ಜೆಡಿಎಸ್ ಇಂದು ಸುಮಲತಾ ಗೌಡ್ತಿಯೇ ಅಲ್ಲ ಎಂದು ಚಕಾರವೆತಿದ್ದು ಇದನ್ನೆಲ್ಲಾ ನೋಡುವಾಗ ಅಸಹ್ಯವಾಗುತ್ತಿದೆ. ಇಷ್ಟೆಲ್ಲಾ ಆದರೂ ಸುಮಲತಾ ಅಂಬರೀಶ್ ಗೆದ್ದುಬರಲಿದ್ದಾರೆ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆ ಎಂದರು.

ಐಟಿ ದಾಳಿ ಬಗ್ಗೆ ದೇವರಾಜೇಗೌಡ ಅವರು ಈಗಾಗಲೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಹಾಸನ ಜಿಲ್ಲೆಗೆ 1962 ಕೋಟಿ ರೂ. ಅನುದಾನ ಸರಕಾರ ನೀಡಿದೆ. ಅದರಲ್ಲಿ ಭಾರೀ ಭ್ರಷ್ಠಾಚಾರ ಆಗಿದೆ ಎಂದು ಅವರು ಎಸಿಬಿ ಕದ ತಟ್ಟಿದರೂ ಪ್ರಯೋಜನವಾಗದ್ದರಿಂದ ಐಟಿ ಗೆ ದೂರು ನೀಡಿದ್ದರು. ಅ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಮೇಲೆ ಐಟಿ ದಾಳಿ ಅಗಿದೆ. ಮೋದೀಜಿಯವರು ಒಂದು ಕಡೆ ಹೇಳಿಕೊಂಡಿದ್ದರು, ಕಪ್ಪು ಕುಳಗಳನ್ನು ನಡುಬೀದಿಗೆ ತಂದು ನಿಲ್ಲಿಸುತ್ತೇನೆ ಎಂದು. ಈಗ ಐಟಿ ದಾಳಿ ಬಗ್ಗೆ ಇದೇ ಕುಮಾರ ಸ್ವಾಮಿ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಬೀದಿಗೆ ಬಂದುಪ್ರತಿಭಟಿಸುತ್ತಿದ್ದು, ಮೋದಿ ಹೇಳಿದ ಮಾತು ನಿಜವಾಯಿತು ಎಂದುಕೊಳ್ತೇವೆ ಎಂದು ಚಾಟಿ ಬೀಸಿದರು.

ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದವರು ಯಾರು ಎಂದು ಕಾಂಗ್ರೆಸ್ ನೆನಪಿಸಿಕೊಳ್ಳಲಿ
1969 ಮತ್ತು1980 ರಲ್ಲಿ ದೇಶದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ ಆಗಿತ್ತು. ಈ ರಾಷ್ಟ್ರೀಕರಣ ಆದ ಬಳಿಕ ಸಣ್ಣ ಬ್ಯಾಂಕ್‌ಗಳು ದೊಡ್ಡ ಬ್ಯಾಂಕ್ ಜೊತೆ ಪರಸ್ಪರ ವಿಲೀನ ಇತ್ಯಾಧಿ ಪ್ರಕ್ರಿಯೆ ಸಾಮಾನ್ಯವಾದುದು. ವಿಜಯ ಬ್ಯಾಂಕ್ ಜೊತೆ ನಮ್ಮ ಜಿಲ್ಲೆಯ ಜನತೆಗೆ ಭಾವನಾತ್ಮಕ ಸಂಬಂಧ ಇದೆ ನಿಜ. ಆದರೆ ಕಾಂಗ್ರೆಸ್ ಹಿಂದೆ ಮಾಡಿದ್ದನ್ನು ತಡೆಯದೆ ಇದೀಗ ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ ಎಂಬಂತಾಗಿದೆ ಕಾಂಗ್ರೆಸ್ ಅವಸ್ಥೆ. ಆದ್ದರಿಂದ ಬ್ಯಾಂಕ್ ರಾಷ್ಟ್ರೀಕರಣ ಮಾಡಿದವರು ಯಾರು ಎಂದು ಕಾಂಗ್ರೆಸ್ ನೆನಪಿಸಿಕೊಳ್ಳಲಿ.
ಕೋಟ ಶ್ರೀನಿವಾಸ ಪೂಜಾರಿ
ಪ್ರತಿಪಕ್ಷದ ನಾಯಕರು ಕರ್ನಾಟಕ ವಿಧಾನ ಪರಿಷತ್.

ಏ. 13 ರಂದು ಮೋದಿಜಿ ಮಂಗಳೂರಿಗೆ
ಬಿಜೆಪಿ ಬಹಿರಂಗ ಪ್ರಚಾರಕ್ಕೆ ಹೆಚ್ಚು ಆಧ್ಯತೆ ಕೊಡದೆ ಮನೆ ಮನೆ ಭೇಟಿಗೆ ಒತ್ತು ಕೊಡಲಿದೆ. ಪ್ರತೀ ಜಿ.ಪಂ ವ್ಯಾಪ್ತಿಯಲ್ಲಿ ಸಭೆ ನಡೆಯಲಿದ್ದು, ಏ. 7 ರಂದು ಎಲ್ಲಾ ಬೂತ್‌ಗಳಲ್ಲಿ ತಮ್ಮದಲ್ಲದ ಬೂತ್‌ಗಳಲ್ಲಿ ಶಾಸಕರು ಆದಿಯಾಗಿ ಎಲ್ಲಾ ನಾಯಕರುಗಳು ಒಂದು ವಾರ್ಡ್‌ನಲ್ಲಿ ಇಡೀ ದಿನ ಕಳೆಯಲಿದ್ದಾರೆ. ಏ. 6 ರಂದು ಬಿಜೆಪಿ ಸಂಸ್ಕಾಪನಾ ದಿನ, ಏ. 14 ರಂದು ಅಂಬೇಡ್ಕರ್ ದಿನಾಚರಣೆಯಂದು ಬಿಜೆಪಿ ಮಹಾಸಂಪರ್ಕ ಅಭಿಯಾನ ನಡೆಯಲಿದೆ. ಮೇ. 13 ರಂದು ಅಪರಾರಾಹ್ನ ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆಯುವ ಮಹಾಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದೀಜಿಯವರು ಆಗಮಿಸಲಿದ್ದಾರೆ.
ಪ್ರತಾಪಸಿಂಹ ನಾಯಕ್: ಬಿಜೆಪಿ ವಿಭಾಗೀಯ ಸಹಪ್ರಭಾರಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.