ಎ.6: ಲಾಯಿಲದಲ್ಲಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ

ಲಾಯಿಲ: ಶ್ರೀ ಗುರುರಾಘವೇಂದ್ರ ಸ್ವಾಮೀ ಸೇವಾ ಪ್ರತಿಷ್ಠಾನ ಲಾಯಿಲ, ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಸಮಿತಿ ಲಾಯಿಲ ಇವರ ವತಿಯಿಂದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆಯು ಎ.6 ರಂದು ಪ್ರಧಾನ ಅರ್ಚಕ ಕುಂಟಿನಿ ರಾಘವೇಂದ್ರ ಭಾಂಗೀಣ್ಣಾಯರ ಪೌರೋಹಿತ್ಯದಲ್ಲಿ ಇಲ್ಲಿಯ ಶ್ರೀ ಗುರುರಾಘವೇಂದ್ರ ಸ್ವಾಮೀ ಮಠದಲ್ಲಿ ಜರುಗಲಿರುವುದು.
ಸಂಜೆ 6 ಗಂಟೆಗೆ ಪೂಜೆ ಪ್ರಾರಂಭಗೊಂಡು, ಪ್ರೊ| ಮಧೂರು ಮೋಹನ ಕಲ್ಲೂರಾಯರಿಂದ ಶನಿಕಥಾ ವಾಚನ ನಡೆಯಲಿದೆ. ನಂತರ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿರುವುದು.
ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ ಬೊಳ್ಳಿದ ಬೊಲುಗುಡೆ ಎಂಬ ತುಳು ಯುಕ್ಷಗಾನ ಬಯಲಾಟ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪೂಜಾ ಸಮಿತಿ ಪ್ರಕಟಣೆ ಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.