ಬೆಳಾಲಿನಲ್ಲಿ ಕೆ.ಸಿ.ಎಲ್-2019 ಕ್ರಿಕೆಟ್ ಪಂದ್ಯಾಟ

Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಕೋಟಿ ಚೆನ್ನಯ ಕ್ರಿಕೆಟರ್‍ಸ್ ಬೆಳಾಲು ಮತ್ತು ಶ್ರೀ ಗುರುನಾರಾಯಣ ಸ್ವಾಮೀ ಸೇವಾ ಸಂಘ ಗ್ರಾಮ ಸಮಿತಿ ಬೆಳಾಲು ಇದರ ಆಶ್ರಯದಲ್ಲಿ ಕೆ.ಸಿ.ಎಲ್ 2019 ಕ್ರಿಕೆಟ್ ಪಂದ್ಯಾಟ ಮಾ.31 ರಂದು ಬೆಳಾಲು ಶ್ರೀ ಧ.ಮಂ ಪ್ರೌಢಶಾಲಾ ವಠಾರದಲ್ಲಿ ನಡೆಯಿತು.
ಪಂದ್ಯಾಟವನ್ನು ನಿವೃತ್ತ ಸಹಾಯಕ ಕೃಷಿ ಅಧಿಕಾರಿ ನಾರಾಯಣ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸ್ವಾಮೀ ಸೇವಾ ಸಂಘ ಬೆಳಾಲು ಗ್ರಾಮ ಸಮಿತಿಯ ಅಧ್ಯಕ್ಷ ನಾಣ್ಯಪ್ಪ ಪೂಜಾರಿ ವಹಿಸಿದ್ದರು. ನವೀನ್ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭ ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೊಷ ಕುಮಾರ್‌ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಬೆಳಾಲು ಗ್ರಾ.ಪಂ. ಸದಸ್ಯ ದಯಾನಂದ ಪಿ, ಉದಯ ಕಲ್ಲಡ್ಕ, ಬೆಳಾಲು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ರಮೇಶ್ ಪೂಜಾರಿ ಗುಂಡ್ಯ, ಯುವ ಬಿಲ್ಲವ ವೇದಿಕೆ ಬೆಳಾಲು ಗ್ರಾಮ ಸಮಿತಿ ಅಧ್ಯಕ್ಷ ಅವಿನಾಶ್ ಇನ್ನಿತರರು ಹಾಜರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.
ವಿವಿಧ ತಂಡಗಳ ಮಾಲಕರುಗಳಾದ ಪ್ರಸಾದ್ ಅಲ್ಯೂಮೀನಿಯಂ ಕನ್ಯಾಡಿ ದೇವಿಪ್ರಸಾದ್, ಬ್ರಹ್ಮಶ್ರೀ ಕ್ರಿಕೇಟರ್‍ಸ್ ದೇಸಿನಕೋಡಿಯ ರವಿ.ಎಸ್.ದೇಸಿನಕೋಡಿ, ಬ್ರಹ್ಮಶ್ರೀ ಮಲ್ಲರ್‌ಮಾಡಿ ಧರ್ಮಸ್ಥಳದ ಜೀವನ್, ಬ್ರಹ್ಮಶ್ರೀ ಕುವೆಟ್ಟು ಇದರ ಸತೀಶ್ ಬಂಗೇರ, ಪ್ರಣಮ್ ಫೈಬರ್ ಫ್ಯಾಬ್ರಿಕೇಶನ್ ವೇಣೂರಿನ ರಾಜೇಶ್ ಸುವರ್ಣ, ಶ್ರೀ ಚಾಮುಂಡೇಶ್ವರಿ ಫ್ರೆಂಡ್ಸ್ ಆರಿಕೊಡಿಯ ದಯಾನಂದ, ಬಿರ್ವೆರ್ ಕಾಶಿಪಟ್ಣದ ಶೈಲೂ, ಅಭಿನಂದನ್ ಸೈಕರ್‍ಸ್‌ನ ನವೀನ್ ಮಂಗಳೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.