ನ್ಯಾಯಸಮ್ಮತ ಚುನಾವಣೆಗೆ ಜನಲೋಕಪಾಲ್, ಅಥವಾ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಲಿ: ಐವನ್ ಡಿಸೋಜಾ ಆಗ್ರಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಚುನಾವಣೆ ಸಮೀಪಿಸುತ್ತಿರುವಂತೆ ಮೋದಿಯವರು ಯುದ್ಧಮಾಡಿ ಆಯ್ತು,! ರಾಕೆಟ್ ಬಿಟ್ಟಾಯಿತು,! ಇದೀಗ ನಿರಂತರವಾಗಿ ಬಿಜೆಪಿ ಹೊರತುಪಡಿಸಿದ ಇತರ ರಾಜಕೀಯ ಪಕ್ಷಗಳ ಮುಖಂಡರ ಮೇಲೆ ನಿರಂತರ ಐಟಿ ದಾಳಿ ಸಂಘಟಿಸುವ ಮೂಲಕ ಅಧಿಕಾರ ದುರುಪಯೋಗಪಡಿಸುತ್ತಿದ್ದಾರೆ. ಇದು ನ್ಯಾಯಸಮ್ಮತ ಚುನಾವಣೆಗೆ ಅಡ್ಡಿಯಾಗುತ್ತಿದ್ದು, ಈ ಕೂಡಲೇ ರಾಷ್ಟ್ರದ ಚುನಾವಣಾ ಆಯೋಗ, ಕೇಂದ್ರ ಜನಲೋಕಪಾಲ್ ಮತ್ತು ರಾಷ್ಟ್ರಪತಿಗಳು ಮಧ್ಯಪ್ರವೇಶಿಬೇಕು ಎಂದು ಐವನ್ ಡಿಸೋಜಾ ಆಗ್ರಹಿಸಿದರು.
ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಮಾ. 28 ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಈ ಸಂಬಂಧವಾಗಿ ಈಗಾಗಲೇ ರಾಜ್ಯ ಚುನಾವಣಾಧಿಕಾರಿಗಳಿಗೆ ಈ ಮೈಲ್ ಮೂಲಕ ಲಿಖಿತ ದೂರು ಸಲ್ಲಿಸಲಾಗಿದ್ದು, ಪ್ರಜಾಪ್ರಭುತ್ವದಲ್ಲಿ ಯಾರೂ ದೊಡ್ಡವರಲ್ಲ, ಕಾಂಗ್ರೆಸ್‌ನವರ ಮೇಲೆ ನಿರಂತರ ಐಟಿ ದಾಳಿ ನಡೆಸುವುದಾದರೆ ಬಿಜೆಪಿಗರು ಕೂಡ ಚುನಾವಣೆಯಲ್ಲಿ ಘೋಷಿಸಿಕೊಳ್ಳುವ ಕೋಟಿ ಕೋಟಿ ಆದಾಯ ಅವರಿಗೆ ಎಲ್ಲಿಂದ ಬಂತು. ಅವರಿಗೆ ಯಾಕೆ ದಾಳಿಗಳು ಆಗುತ್ತಿಲ್ಲ, ಅದ್ದರಿಂದ ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಶೀಘ್ರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ಎರಡು ದಿನಗಳಲ್ಲಿ ಜಿಲ್ಲೆಗೆ ಪ್ರತ್ಯೇಕ ಚುನಾವಣಾ ಪ್ರಣಾಳಿಕೆ ಬಿಡುಗಡೆ:
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ದ.ಕ ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೊಳಿಸಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದರು.
ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ, ಐಟಿ ಕಂಪೆನಿಗಳ ಸ್ಥಾಪನೆ, ತುಳುಭಾಷೆಯನ್ನು ಎಂಟನೇ ಪರಿಚ್ಛೇದ ಸೇರ್ಪಡೆಗೆ ಕ್ರಮ, ಅಂತರ್ಜಲ ಅಭಿವೃದ್ಧಿಗೆ ಪೂರಕ ಕ್ರಮ, ಸಮುದ್ರ ನೀರನ್ನು ಸಹಿ ನೀರಾಗಿ ಪರಿವರ್ತಿಸುವ ಯೋಜನೆ, ಇಲ್ಲೇ ಪಾಸ್‌ಪೋರ್ಟ್ ಪ್ರಿಂಟ್ ಮಾಡಬಹುದಾದ ಪೂರ್ಣ ಪ್ರಮಾಣದ ಪ್ರಾಸ್‌ಪೋರ್ಟ್ ಕೇಂದ್ರ ಸ್ಥಾಪನೆ, ಅಡಿಕೆ ಕೃಷಿಗೆ ಬೆಂಬಲೆ ಬೆಲೆ ಬಗ್ಗೆ ಕ್ರಮ, ಕೊಳೆರೋಗಕ್ಕೆ ಸೂಕ್ತ ಪರಿಹಾರಕ್ಕೆ ಕ್ರಮ, ಕಾಫಿ ಮತ್ತು ರಬ್ಬರ್ ಬೋರ್ಡ್ ಮಾದರಿಯಲ್ಲಿ ಅಡಿಕೆ ಅಬಿವೃದ್ಧಿ ನಿಗಮ ಸ್ಥಾಪನೆ, ವಿಜಯ ಬ್ಯಾಂಕ್ ಅನ್ನು ಬಹುಕೋಟಿ ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಕ್ಕೆ ತೀವ್ರ ಪ್ರತಿರೋಧ ಒಡ್ಡಿ ವಿಮುಕ್ತಗೊಳಿಸುವುದು ಅಥವಾ ವಿಜಯ ಬ್ಯಾಂಕ್ ಹೆಸರನ್ನು ಮತ್ತೆ ತಂದುಕೊಡುವುದು, ರೈಲ್ವೇ ನಿಲ್ದಾಣದಲ್ಲಿ ಅಂಡರ್ ಬ್ರಿಡ್ಜ್ ಮತ್ತು ಓವರ್‍ಸ್ ಬ್ರಿಡ್ಜ್‌ಗಳ ಸ್ಥಾಪನೆ, ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ಪೂರಕ ಕ್ರಮ, ಸಿಆರ್‌ಝೆಡ್‌ನಲ್ಲಿ ಉದ್ಯೋಗದಲ್ಲಿ ನಿಯಮ ಬದಲಾವಣೆಗೆ ಕ್ರಮ ಇತ್ಯಾಧಿ ಪ್ರಮುಖ ಅಂಶಗಳು ಈ ಪ್ರಣಾಳಿಕೆಯಲ್ಲಿ ಒಳಗೊಂಡಿದೆ ಎಂದರು.
ಪಂಪ್‌ವೆಲ್ ಫ್ಲೈ ಓವರ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ನಳಿನ್ ಕುಮಾರ್ ಅವರಿಗೆ 10 ವರ್ಷದಲ್ಲಿ ಸಾಧ್ಯವಾಗಿಲ್ಲ, ಇಲ್ಲಿ ಸಂಸದರ ಸ್ಥಾನವೇ ಇರಲಿಲ್ಲ ಎಂದುಕೊಳ್ಳುತ್ತೇವೆ. ಆದ್ದರಿಂದ ಸೊನ್ನೆಯಿಂದ ನಮ್ಮದು ಆರಂಭ, ಮಿಥುನ್ ರೈ ಗೆಲ್ಲಿಸಿದರೆ ಶೀಘ್ರದಲ್ಲೇ ಫ್ರೈ ಓವರ್ ಪೂರ್ತಿಗೊಳಿಸಲಿದ್ದೇವೆ ಎಂದರು.

ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಜಿಲ್ಲೆಗೆ:
ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಜಿಲ್ಲೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಮಲ್ಲಿಕಾರ್ಜುನ ಖರ್ಗೆ, ಆಝಾದ್ ಮೊದಲಾದ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ. ಪ್ರತೀ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಸಭೆಗಳನ್ನು ಕೈಗೊಳ್ಳಲಿದ್ದು, ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ಎರಡನೇ ಹಂತದಲ್ಲಿ ನಡೆಯುವ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ನಮ್ಮ ಕಾರ್ಯಕರ್ತರು ಮನೆಗೆ ಮನೆಗೆ ಹೋಗಿ ಪ್ರಚಾರ ಕೈಗೊಳ್ಳಲಿದ್ದು, ಕೇಂದ್ರದ ವೈಫಲ್ಯಗಳನ್ನು ತಿಳಿಹೇಳಲಿದ್ದಾರೆ. ಅಂತೂ ನಮ್ಮ ಯುವ ಅಭ್ಯರ್ಥಿ ಮಿಥುನ್ ರೈ ಈ ಬಾರಿ ಜಯಗಳಿಸುವುದು ಖಚಿತ ಎಂದರು.

ಡೈರಿ ಪ್ರಕರಣಗಳಿಗೆ ತಕ್ಷಣ ಹೇಳಿಕೆ ಕೊಡುವ ಪ್ರಧಾನಿಗಳು:
ಯಡಿಯೂರಪ್ಪ ಡೈರಿ, ಲೋಹರ್‌ಸಿಂಗ್ ಡೈರಿ ಮೊದಲಾದ ಪ್ರಕರಣಗಳು ನಡೆದಾಗ ತಕ್ಷಣ ಪ್ರತಿಕ್ರಿಯೆ ನೀಡುತ್ತಿರುವ ಪ್ರಧಾನಿಗಳು ಜನಪರ ವಿಚಾರಗಳನ್ನು ಪ್ರತಿಪಕ್ಷಗಳು ಮುಂದಿಟ್ಟಾಗ ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬುದು ಸಂಶಯಕ್ಕೆಡೆಮಾಡಿಕೊಟ್ಟಿದೆ. ಆದ್ದರಿಂದ ಮೋದಿಯವರು ತಾಳಕ್ಕೆ ತಕ್ಕ ಕುಣಿಯವು ಕೆಲಸ ಮಾಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಜಶೇಖರ ಅಜ್ರಿ ಮತ್ತು ಎನ್ ಶ್ರೀನಿವಾಸ ವಿ ಕಿಣಿ, ಡಿಸಿಸಿ ಕಾರ್ಯದರ್ಶಿ ಡಿ ಜಗದೀಶ್, ಮುಖಂಡರಾದ ಬಿ ಅಶ್ರಫ್ ನೆರಿಯ, ಅನಿಲ್ ಪೈ, ಅಭಿನಂದನ್ ಹರೀಶ್ ಕುಮಾರ್, ರಾಜಶೇಖರ ಶೆಟ್ಟಿ ಮಡಂತ್ಯಾರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.