ಕೆಎಸ್ಸಾರ್ಟಿಸಿ ಸಿಬ್ಬಂದಿಗಳಿಗೆ ಅಂಚೆ ಮತ ಚಲಾವಣೆಗೆ ಅವಕಾಶ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಲೋಕಸಭಾ ಚುನಾವಣೆ ದಿನ ಕೆಎಸ್‌ಆರ್‌ಟಿಸಿ ಚಾಲಕ ಮತ್ತು ನಿರ್ವಾಹಕರು ಚುನಾವಣಾ ಕರ್ತವ್ಯದಲ್ಲಿರುವುದರಿಂದ ತಮ್ಮ ಕ್ಷೇತ್ರಗಳಿಗೆ ತೆರಳಿ ಮತ ಚಲಾಯಿಸಲು ಅನುಕೂಲವಾಗದೇ ಇರುವುದನ್ನು ಮನಗಂಡು ಕೆಸ್ಸಾರ್ಟಿಸಿ ಆಡಳಿತ ಮಂಡಳಿ ಅಂಚೆ ಮತ ಚಲಾವಣೆಗೆ ಅವಕಾಶ ಕಲ್ಪಿಸಿದೆ.
ಬಸ್ಸುಗಳು ಹಾಗೂ ಸಿಬಂದಿ ಚುನಾವಣೆ ಸಮಯದಲ್ಲಿ ತಾವು ಮತ ಚಲಾಯಿಸುವ ಸ್ಥಳಗಳ ಹೊರತಾಗಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ಆ ಸಿಬ್ಬಂದಿ ಕೂಡ ತಮ್ಮ ಮತದಾನದ ಹಕ್ಕಿನಿಂದ ದೂರ ಉಳಿಯಬಾರದೆಂದು ಅಂಚೆ ಮತ ಚಲಾಯಿಸಲು ಅನುಕೂಲವಾಗುವಂತೆ ನಿಗಮದ ಎಲ್ಲಾ ವಿಭಾಗಗಳಿಂದ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಿಂದ ಚಾಲಕ, ನಿರ್ವಾಹಕರೂ ಕೂಡ ಮತ ಚಲಾಯಿಸುವ ಅವಕಾಶ ಹೊಂದುತ್ತಾರೆ. ಅತೀ ಹೆಚ್ಚು ಅಂಚೆ ಮತ ಶೇಕಡವಾರು ಸಂಗ್ರಹಿಸುವ ಘಟಕ ಹಾಗೂ ವಿಭಾಗಕ್ಕೆ ವ್ಯವಸ್ಥಾಪಕ ನಿರ್ದೇಶಕರು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ಮತ ಚಲಾಯಿಸುವ ಅವಕಾಶದಿಂದ ಸಿಬ್ಬಂದಿ ವಂಚಿತರಾಗಬಾರದೆಂದು ಮನವಿ ಮಾಡಿದ್ದಾರೆ. ಕೆಸ್ಸಾರ್ಟಿಸಿ ಬಸ್ಸುಗಳು ಅಗತ್ಯ ಸೇವಾ ಸಂಸ್ಥೆಯಾಗಿರುವುದರಿಂದ ರಸ್ತೆಗಳಲ್ಲಿ ಕಾರ್ಯಚರಣೆಯಲ್ಲಿರುತ್ತವೆ. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಅವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.