ಮಾಜಿ ಸೈನಿಕ ಕಾನತ್ತಿಲ ಕೃಷ್ಣ ಭಟ್ಟ ನಿಧನ

ತೆಂಕಕಾರಂದೂರು: ಆಲಡ್ಕ ಗೌರಿನಿವಾಸದಲ್ಲಿ ನೆಲೆಸಿದ್ದ ಮಾಜಿ ಸೈನಿಕ, ನಿವೃತ ಸೇನಾಧಿಕಾರಿ ಕಾನತ್ತಿಲ ಕೃಷ್ಣ ಭಟ್ಟ (74ವ.) ಅವರು ಮಾ. 25 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲಿದ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಮೃತಪಟ್ಟರು.
ಸೈನಿಕರಾಗಿದ್ದ ಅವರು ಮದ್ರಾಸ್ ಇಂಜಿನಿಯರಿಂಗ್ ಬಳಗದಲ್ಲಿ ಸೇವೆ ಸಲ್ಲಿಸಿದ್ದರು. ಯುದ್ಧೋಪಕರಣ ತಂತ್ರಜ್ಞರಾಗಿ ವಿಭಾಗದಲ್ಲಿ ಅವರ ಸೇವೆ ಗಣನೀಯವಾಗಿತ್ತು. ನಿವೃತಿಯ ಬಳಿಕ ಉತ್ತಮ ಕೃಷಿಕರಾಗಿ, ಜೊತೆಗೆ ಸ್ಥಳೀಯ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು.
ಸೈನ್ಯದಲ್ಲಿದ್ದ ವೇಳೆ ಅವರು 1965ರ ಚೈನಾ ಯುದ್ಧ ಮತ್ತು 1971 ರ ಬಾಂಗ್ಲಾ ಯುದ್ಧದಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದರು.
ಸೈನ್ಯದಲ್ಲಿದ್ದ ಪ್ರತಿಷ್ಠಿತ ಸೇನಾ ಪದಕ, ಪೂರ್ವಿಸ್ಟಾರ್, ನಾರ್ಥ್‌ಸ್ಟಾರ್, ಜಮ್ಮು ಕಾಶ್ಮೀರ ಶೌರ್ಯಚಕ್ರ, ದೀರ್ಘಸೇವಾ ಪದಕ ಗೌರವಗಳನ್ನು ಪಡೆದವರಾಗಿದ್ದಾರೆ.
ಮೃತರು ಪತ್ನಿ ಗೌರಮ್ಮ, ಎರಡು ಹೆಣ್ಣು ಮತ್ತು 1 ಗಂಡು ಮಕ್ಕಳು, ಓರ್ವ ಅಳಿಯ ಗುರುವಾಯನಕೆರೆಯಲ್ಲಿ ಖ್ಯಾತ ವೈದ್ಯರಾಗಿರುವ ಡಾ. ವೇಣುಗೋಪಾಲ ಶರ್ಮ ಸಹಿತ, ಅಳಿಯ, ಸೊಸೆ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷರಾದ ಕಾಂಚೋಡು ಗೋಪಾಲಕೃಷ್ಣ ಭಟ್ಟ್, ಸುನಿಲ್ ಶೈಣೈ ಮತ್ತು ರಾಂ ಭಟ್, ಸದಸ್ಯರಾದ ರವಿಪ್ರಸಾದ್ ವೇಣೂರು ಮೊದಲಾದವರು ಭೇಟಿ ನೀಡಿ ಅಂತಿಮದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.