ಮಾಲಾಡಿ ಶಾಲಾ ಮೈದಾನ ವಿವಾದ: ಡಿಸಿ ಮಧ್ಯಪ್ರವೇಶಕ್ಕೆ ಡಿಎಸ್‌ಎಸ್ ಆಗ್ರಹ

Advt_NewsUnder_1
Advt_NewsUnder_1
Advt_NewsUnder_1

ಮಾಲಾಡಿ: ಇಲ್ಲಿನ ಶಾಲಾ ಆಟದ ಮೈದಾನ ಪ್ರಕರಣ ಡಿಸಿ ಮನ್ನಾ ಭೂಮಿ ಮತ್ತು ಶಾಲಾಭಿವೃದ್ಧಿ ಸಮಿತಿ ನಡುವಿನ ವಿವಾದ ಜಠಿಲವಾಗುತ್ತಿದ್ದು ಶೀಘ್ರದಲ್ಲೇ ಡಿಸಿ ಅವರು ಮಧ್ಯಪ್ರವೇಶಿಸಬೇಕು ಎಂದು ಡಿಎಸ್‌ಎಸ್ ರಾಜ್ಯ ಸಮಿತಿ ಅಗ್ರಹಿಸುತ್ತದೆ ಎಂದು ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಈ ಬಗ್ಗೆ ಲಿಖಿತ ಹೇಳಿಕೆ ಮಾಧ್ಯಮಕ್ಕೆ ಬಿಡುಗಡೆಗೊಳಿಸಿರುವ ಅವರು ಇತರ ಪ್ರಮುಖ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ.
ದ. ಕ-ಉಡುಪಿಯಲ್ಲಿ ಡಿಸಿ ಮನ್ನಾ ಭೂಮಿಯನ್ನು ಜಮೀನು ರಹಿತ ದಲಿತ ಕುಟುಂಬಗಳಿಗೆ ಮಂಜೂರುಗೊಳಿಸಬೇಕು, ಡಿಸಿ ಮನ್ನಾ ಭೂಮಿಯನ್ನು ಅರಣ್ಯ ಇಲಾಖೆ, ಗೇರು ಅಭಿವೃದ್ಧಿ ನಿಗಮ ಮತ್ತಿತರ ಸರಕಾರಿ, ಸರಕಾರೇತರ ಸಂಸ್ಥೆಗಳು ಆಕ್ರಮಿಸಿರುವುದನ್ನು ಕೂಡಲೇ ತೆರವುಗೊಳಿಸಿ ಅರ್ಹ ಭೂ ರಹಿತ ದಲಿತರಿಗೆ ನೀಡಬೇಕು, ಮಾಲಾಡಿ ದಲಿತ ಕಾರ್ಯಕರ್ತರ ಮೇಲೆ ಹಾಕಲಾಗಿರುವ ಸುಳ್ಳು ಕೇಸು ಸರಕಾರ ವಾಪಾಸು ಪಡೆಯಬೇಕು, ತಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು, ಮಾಲಾಡಿ ಆಟದ ಮೈದಾನವನ್ನು ಸಾರ್ವಜನಿಕ ಆಟದ ಮೈದಾನ ಎಂದು ಘೋಷಣೆ ಮಾಡಿ ಸಾರ್ವಜನಿಕರಿಗೆ ಮುಕ್ತವಾಗಿಸಿ ವಿವಾದಕ್ಕೆ ಅಂತ್ಯಹಾಡಬೇಕು ಎಂದು ಲಿಖಿತ ಬೇಡಿಕೆ ಸಲ್ಲಿಸಲಾಗಿದೆ. ಪತ್ರದಲ್ಲಿ ಮಾವಳ್ಳಿ  ಶಂಕರ್ ಸಹಿತ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್, ಜಿಲ್ಲಾ ಪ್ರ. ಸಂಚಾಲಕ ಬಿ.ಕೆ ವಸಂತ್ ಅವರೂ ಸಹಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.