ಅಳದಂಗಡಿ ತೋಟಗಾರಿಕಾ ರೈತ ಉತ್ಪನ್ನ ಕಂಪೆನಿಯಿಂದ ತರಬೇತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಣಬೆ ಪ್ರೊಟೀನ್‌ಯುಕ್ತ ಮತ್ತು ಲಾಭದಾಯಕ ಕೃಷಿ: ಕೃಷಿ ತಜ್ಞ ಪಾಂಡುರಂಗ

ಬೆಳ್ತಂಗಡಿ: ಅಣಬೆಯಲ್ಲಿ ಪ್ರೋಟಿನ್ ಮತ್ತು ಜೀವಸತ್ವಗಳು ಹೇರಳವಾಗಿದ್ದು ಶರ್ಕರ ಪಿಷ್ಠ ಕಡಿಮೆ ಇರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆಯ ಆಹಾರ ಹಾಗೂ ಅಣಬೆ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅಣಬೆ ಕೃಷಿ ತಜ್ಞ, ಕೃಷಿ ವಿಜ್ಞಾನ ಕೇಂದ್ರ ಕಾಸರಗೋಡಿನ ಪಾಂಡುರಂಗ ಹೇಳಿದರು.
ಇಲ್ಲಿನ ಅಂಬೆಡ್ಕರ್ ಭವನದಲ್ಲಿ ನಡೆದ ಅಳದಂಗಡಿ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ಹಾಗೂ ಶ್ರಮಶಕ್ತಿ ಸ್ವ ಸಹಾಯ ಸಂಘಗಳ ಜಂಟಿ ಆಶ್ರಯದಲ್ಲಿ ನಡೆದ ಅಣಬೆ ಕೃಷಿ ತರಬೇತಿಯಲ್ಲಿ ಅವರು ಮಾತನಾಡುತ್ತಿದ್ದರು. ಅತ್ಯಧಿತ ಪ್ರೊಟೀನ್ ಇರುವ ಆಹಾರ ವರ್ಧಕ ಇತ್ತೀಚಿನ ದಿನಗಳಲ್ಲಿ ಅಣಬೆಗೆ ಬೇಡಿಕೆ ಹೆಚ್ಚುತ್ತಿದೆ. ಎಲ್ಲಾ ಹೊಟೇಲ್‌ಗಳ ಆಹಾರದಲ್ಲಿ ಅಣಬೆ ಹೆಚ್ಚು ಉಪಯೋಗಿಸಲಾಗುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದರು. ನಂತರ ಅಣಬೆ ಕೃಷಿ ಬೆಳೆಯುವ ಕುರಿತು ಸಂಪೂರ್ಣ ತರಬೇತಿ ನೀಡಿದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕಂಪೆನಿಯ ಅಧ್ಯಕ್ಷ ಹರಿದಾಸ್ ಎಸ್. ಎಂ, ಸ್ವ ಸಹಾಯ ಸಂಘಗಳ ಸದಸ್ಯರು ಅಣಬೆ ಕೃಷಿ ಮಾಡುವ ಮೂಲಕ ಗುಣಮಟ್ಟದ ಆಹಾರ ಮನೆಯಲ್ಲಿ ಉಪಯೊಗಮಾಡಿ ಸ್ವಲ್ಪ ಮಾರಾಟ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದರು. ಕೃಷಿ ವಿಜ್ನಾನ ಕೇಂದ್ರದ ಸಲಹೆಗಾರ್ತಿ ಸುಕನ್ಯಾ ಸ್ವಾಗತಿಸಿದರು. ಶ್ರಮ ಶಕ್ತಿ ಸ್ವ ಸಹಾಯ ಸಂಘದ ಪುಷ್ಪಾ ಉಪಸ್ಥಿತರಿದ್ದರು. ಸುಜಿತ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.