ಏ. 7-14: ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ರಾಮ ತಾರಕ ಮಂತ್ರ ಸಪ್ತಾಹ

ಪ್ರತಿಷ್ಠಾ ಮಹೋತ್ಸವಮಹಾ ಬ್ರಹ್ಮರಥೋತ್ಸವ
 

ಧರ್ಮಸ್ಥಳ: ದಕ್ಷಿಣದ ಅಯೋದ್ಯೆಯೆಂದೇ ಕರೆಯಲ್ಪಡುವ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದಲ್ಲಿ ಎ.7-14 ರ ತನಕ 59 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವವು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಮಠದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು “ಶ್ರೀ ರಾಮ ಜಯರಾಮ ಜಯ ಜಯ ರಾಮ” ಎಂಬ ತಾರಕ ಮಂತ್ರವನ್ನು ಈ ಪುಣ್ಯಕ್ಷೇತ್ರದಲ್ಲಿ ಪಠಿಸಲು ಪ್ರಾರಂಭಿಸಿ ಸುಮಾರು ೫೯ವರ್ಷಗಳಾಗಿವೆ. ರಾಜ್ಯದಲ್ಲೇ ಅಪರೂಪದ ಈ 7 ದಿನಗಳ ಆಹೋರಾತ್ರಿ ನಡೆಯುವ ಭಜನೆಗೆ ವಿವಿಧ ಜಿಲ್ಲೆಗಳಿಂದ ನೂರಾರು ಭಜನಾ ತಂಡಗಳು ಬಂದು ಈ ಸಪ್ತಾಹದಲ್ಲಿ ಭಾಗವಹಿಸಿ ಧನ್ಯತೆ ಪಡೆಯುತ್ತಾರೆ.
ರಾಜ್ಯ ಮತ್ತು ಜಿಲ್ಲೆಯ ಬಹುತೇಕ ಮಾಜಿ ಸಚಿವರುಗಳು, ಶಾಸಕರುಗಳು, ಜಿಲ್ಲೆಯ ಎಲ್ಲಾ ಮಾಜಿ ಶಾಸಕರುಗಳು, ವಿವಿಧ ಸ್ತರದ ಜನಪ್ರತಿನಿಧಿಗಳು, ಗಣ್ಯರುಗಳು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಎ. 7- ಬೆಳಿಗ್ಗೆ “ಶ್ರೀರಾಮನಾಮ” ಸಪ್ತಾಹದ ಅಖಂಡ ನಂದಾ ದೀಪದ ಉದ್ಘಾಟನೆ: ಉಭಯ ಸದನಗಳ ಶಾಸಕರುಗಳಾದ ಹರೀಶ್ ಪೂಂಜ ಮತ್ತು ಹರೀಶ್ ಕುಮಾರ್ ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರರಿಂದ.

 “ಶ್ರೀ ರಾಮ ಜಯ ರಾಮ ಜಯ ಜಯ ರಾಮ” ರಾಮ ತಾರಕ ಮಂತ್ರದ ನಾಮೋಚ್ಛಾರಣೆಯ ಮೂಲಕ ಉದ್ಘಾಟನೆ: ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ.

ಎ. 7- ರಂದು ವೇದಮೂರ್ತಿ ಶ್ರೀ ಲಕ್ಷ್ಮೀಪತಿ ಗೋಪಾಲಾಚಾರ್‍ಯ ಬೆಂಗಳೂರು ಇವರ ವೈದಿಕ ನೇತೃತ್ವದಲ್ಲಿ ಜಾತ್ರೋತ್ಸವ ಪ್ರಾರಂಭ. ಎಲ್ಲಾ ಪರಿವಾರ ದೇವರುಗಳ ಬಲಿ ಉತ್ಸವಗಳು, ಚಂದ್ರಮಂಡಲ, ಪುಷ್ಪರಥ, ಬೆಳ್ಳಿರಥ, ಹನುಮಾನ್ ರಥೋತ್ಸವ.

 ಎ. 14-ಸಂಜೆಯಿಂದ ದೇವರ ಪಾಲಕಿ ಬಲಿ ಉತ್ಸವ, ಬ್ರಹ್ಮರಥೋತ್ಸವ ಹಾಗೂ ರಕ್ತೇಶ್ವರಿ ಗುಳಿಗ ದೈವಗಳಿಗೆ ನೇಮೋತ್ಸವ.
 
ಎ. 16- ಶ್ರೀ ಗುರುದೇವ ಮಠಕ್ಕೆ ಸಂಬಂಧಪಟ್ಟ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಮಹೋತ್ಸವ ಹಾಗೂ ಸನ್ಯಾಸಿ ಪಂಜುರ್ಲಿ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವದ ನೇಮೋತ್ಸವ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.