ಮಿಥುನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ನವೀನ್ ಕರ್ಕೇರ ವಿರುದ್ಧ ದೂರು

ಬೆಳ್ತಂಗಡಿ: ಮಂಗಳೂರು ಲೋಕಸಭಾ ಅಭ್ಯರ್ಥಿ ಕಾಂಗ್ರೆಸ್‌ನ ಮಿಥುನ್ ರೈ ಅವರ ವಿರುದ್ಧ ತೀರಾ ಅವಹೇಳನಕಾರಿಯಾಗಿ ನಿಂದಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಬಗ್ಗೆ ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ನವೀನ್ ಕರ್ಕೇರಾ ಅವರ ವಿರುದ್ಧ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಮಿತಿ ಅಧ್ಯಕ್ಷ ಅನಿಲ್ ಪೈ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಮಿಥುನ್ ರೈ ಅವರಿಗೆ ಅವಾಚ್ಯ ಶಬ್ಧಗಳಿಂದ ಬೈದು ಅವಹೇಳಿಸಿದ ಬಗ್ಗೆ ದಾಖಲೆ ಸಹಿತ ಸಲ್ಲಿಸಲಾದ ಈ ದೂರಿನಲ್ಲಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಅಲ್ಲದೆ ಇದೊಂದು ನೀತಿ ಸಂಹಿತೆ ಸ್ಪಷ್ಟ ಉಲ್ಲಂಗನೆಯಾಗಿದೆ ಎಂದೂ ದೂರಲಾಗಿದೆ.
ಠಾಣೆಯಲ್ಲಿ ದೂರುನೀಡುವ ವೇಳೆ ಅಶ್ವಥ್ ಸೆಬಾಸ್ಟಿಯನ್, ಇಂಮ್ತಿಯಾಝ್ ಬಂಗಾಡಿ, ಯತೀಶ್ ಧರ್ಮಸ್ಥಳ, ನಝೀರ್ ಶಕ್ತಿನಗರ ಮತ್ತು ರಮೀಝ್ ಬೆಳ್ತಂಗಡಿ ಇವರು ಉಪಸ್ಥಿತರಿದ್ದರು. ದೂರು ಸ್ವೀಕರಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಪೊಲೀಸ್ ಸಿಬ್ಬಂದಿ ಹೊನ್ನಪ್ಪ ಇವರು ಆರೋಪಿ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.