ಬೆಳ್ತಂಗಡಿಯಲ್ಲಿ ಗ್ಲೋಬಲ್ ಬಿಸಿನೆಸ್ ಗ್ರೂಪ್ ಅಟೋ ಟ್ರೇಡಿಂಗ್ ಪ್ರೈ. ಲಿ. ಶಾಖೆ ಉದ್ಘಾಟನೆ

ವ್ಯವಹಾರ ವಿಚಾರದಲ್ಲಿ ಮಾಹಿತಿ ಮತ್ತು ನಂಬಿಕೆ ಅತೀ ಅಗತ್ಯ: ವಿಜಯರಾಘವ ಪಡುವೆಟ್ನಾಯ


 

ಬೆಳ್ತಂಗಡಿ: ಜೀವನ ಎಂದರೆ ಸಮಸ್ಯೆಗಳ ಆಗರ. ಅವುಗಳನ್ನು ಎದುರಿಸಿ ಬಾಳಬಂಡಿ ಸಾಗಿಸಬೇಕು. ಅಂತೆಯೇ ವ್ಯವಹಾರ ಕ್ಷೇತ್ರದಲ್ಲಿ ಹೊಸ ಹೊಸ ಆಲೋಚನೆ, ಮಾಹಿತಿ ಮತ್ತು ನಂಬಿಕೆ ಇದ್ದರೆ ವ್ಯಾಪಾರ ಧರ್ಮದಲ್ಲಿ ಶ್ರೇಷ್ಠತೆ ಸಾಧಿಸಬಹುದು ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಆನುವಂಶೀಯ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಹೇಳಿದರು.
ಬೆಳ್ತಂಗಡಿ ಮೂರುಮಾರ್ಗದ ಬಳಿಯ ಸುವರ್ಣ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ತೆರೆಯಲಾದ “ಗ್ಲೋಬಲ್ ಬಿಸಿನೆಸ್ ಗ್ರೂಪ್ ಅಟೋ ಟ್ರೇಡಿಂಗ್ ಪ್ರೈವೆಟ್ ಲಿಮಿಟೆಡ್” ಇದರ ಬೆಳ್ತಂಗಡಿ ಶಾಖೆಯ ಉದ್ಘಾಟನೆ ಬಳಿಕ ಎಸ್‌ಡಿಎಂ ಕಲಾಭವನದ ಪಿನಾಕಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿದ್ದ ನೋಟರಿ ನ್ಯಾಯವಾದಿ ಗೋಪಾಲಕೃಷ್ಣ ಗೌಡ ಮಾತನಾಡಿ, ಕರಾವಳಿ ಭಾಗದವರು ಭೌತಿಕ ವಸ್ತುಗಳ ಮೇಲೆ ಮಾತ್ರ ಹಣ ಹೂಡಿಕೆ ಮಾಡುವವರಾಗಿದ್ದು, ಕಣ್ಣಿಗೆ ಕಾಣದ ವಸ್ತುಗಳ ಮೇಲೆ ಹಣತೊಡಗಿಸಿಕೊಳ್ಳುವುದಿಲ್ಲ. ಈಗ ಮಾರುಕಟ್ಟೆ ಡಿಜಿಟಲೀಕರಣಗೊಂಡಿದೆ. ಇಲ್ಲಿ ವ್ಯವಹಾರ ಜ್ಞಾನ, ನಂಬಿಕೆ ಮುಖ್ಯವೆನಿಸುತ್ತದೆ. ಅದನ್ನೂ ಜಿಬಿಜಿ ಸಂಸ್ಥೆ ಪಾಲಿಸಲಿದೆ ಎಂಬ ನಂಬಿಕೆ ಇದೆ ಎಂದರು.
ಶಾಸಕ ಹರೀಶ್ ಪೂಂಜ ಸಮಾರಂಭದಲ್ಲಿ ಭಾಗಿಯಾಗಿ ಪ್ರೋತ್ಸಾಹ ನೀಡಿದರು.
ಬೆಳ್ತಂಗಡಿ ಶಾಖೆಯ ಮುಖ್ಯಸ್ಥೆ ಸುಶ್ಮಿತಾ ರಾವ್ ಸ್ವಾಗತಿಸಿದರು. ಮುಖ್ಯಸ್ಥ ರವಿ ಕುಮಾರ್‌ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಸಂಹಿತಾ ಜಿ, ಹರೀಶ್ ಟಿ, ಉಪಸ್ಥಿತರಿದ್ದರು.
ಇನ್ನೊರ್ವ ಪಿಆರ್‌ಒ ಶಿವರಂಜನ್ ಇ ವಂದನಾರ್ಪಣೆಗೈದರು. ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಮಂಡಳಿ ಮತ್ತು ಸಲಹಾ ಮಂಡಳಿಯ ಪ್ರಮುಖರಾದ ಗಣೇಶ್ ಹಾಗೂ ಇತರರು ಭಾಗಿಯಾಗಿದ್ದರು.

“ಜಿಬಿಜಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್” ಸ್ಥಾಪನೆಗೆ ನಿರ್ಧಾರ
ಉದ್ಘಾಟನೆ ನೆರವೇರಿಸಿದ ಜಿಬಿಜಿ ಗ್ರೂಪ್ ಎಂ.ಡಿ ಡಾ. ವಿನೋದ್ ಕುಮಾರ್ ಮಾತನಾಡಿ, ಹಾಸನದಲ್ಲಿ ಕೇವಲ ಒಂದೂವರೆ ತಿಂಗಳ ಹಿಂದೆ ನೊಂದಾವಣೆಗೊಂಡು ಪ್ರಾರಂಭವಾದ ಜಿಬಿಜಿ ಸಂಸ್ಥೆ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ವ್ಯಾಪಕ ವಿಸ್ತಾರವಾಗುವ ಎಲ್ಲಾ ಲಕ್ಷಣ ಗೋಚರಿಸಿದೆ. ವರ್ಷದ ಕೊನೆಗೆ ಕರ್ನಾಟಕದ ಒಂದು ಕಡೆ ಜ್ಯುವೆಲ್ಲರಿ ತೆರೆಯುವ ಕನಸು ಇತ್ತು. ಇದೀಗ ಜನರ ಸಹಭಾಗಿತ್ವ ನೋಡಿದರೆ ಯಶಸ್ವಿ ಇನ್ನಷ್ಟು ಹೆಜ್ಜೆ ಇಡುವ ವಿಶ್ವಾಸ ಮೂಡಿದೆ. ನಮ್ಮದು ಪಬ್ಲಿಕ್ ಜ್ಯುವೆಲ್ಲರಿ, ನಮ್ಮಲ್ಲಿ ಗ್ರಾಹಕರ ಸೃಷ್ಟಿ ಮೊದಲು ಆ ಬಳಿಕ ಮಳಿಗೆ ಎಂಬ ಧ್ಯೇಯದೊಂದಿಗೆ ಮುಂದುವರಿಯುವ ಸಂಸ್ಥೆ. ನಮಗೆ ಕೇವಲ ವ್ಯಾಪಾರದ ಉದ್ಧೇಶ ಮಾತ್ರ ಅಲ್ಲ. ಜನರ ಸೇವೆ, ಕಷ್ಟದಲ್ಲಿರುವವರಿಗೆ ಆಸರೆಯಾಗುವ ಮಹದುದ್ಧೇಶ ಕೂಡ ಹೊಂದಿದೆ. ಆ ಹಿನ್ನೆಲೆಯಲ್ಲಿ ಮುಂದಿನ ತಿಂಗಳಲ್ಲೇ ಜಿಬಿಜಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಸೇವಾ ಸಂಸ್ಥೆಯನ್ನೂ ತೆರೆಯಲಿದ್ದೇವೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.