ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಬಳಿಕ ಮಾಧ್ಯಮಗೋಷ್ಠಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದರನ್ನು ಆರಿಸಿ ಕಳುಹಿಸಿದ್ದರ ಪ್ರತೀಕವಾಗಿ ಇಂದು ನ್ಯಾಯಾಲಯ, ಎಂಆರ್‌ಪಿಎಲ್ ಕೈಗಾರಿಕೆ, ರಾಷ್ಟ್ರೀಯ ಹೆದ್ದಾರಿಗಳು ಇತ್ಯಾಧಿ ಶಾಶ್ವತ ಅಭಿವೃದ್ದಿ ಕಾಮಗಾರಿಗಳು ನಡೆದಿವೆ. ಆದರೆ ಕಳೆದ 10 ಜಿಲ್ಲಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಹೇಳಿದರು.
ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳನ್ನುದ್ಧೇಶಿಸಿ ಮಾತನಾಡಿದರು.
ಚುನಾವಣಾ ಪ್ರಚಾರ ಪೂರ್ವ ಕಾರ್ಯಕ್ರಮಗಳಾದ ತರಬೇತಿ ಇತ್ಯಾದಿ  ಜಿಲ್ಲಾಧ್ಯಂತ ಪೂರ್ತಿಗೊಳಿಸಿದ್ದು ಕಾಂಗ್ರೆಸ್ ಗೆಲ್ಲಿಸಲು ಎಲ್ಲ ತಯಾರಿಗಳು ನಡೆದಿವೆ.ಈ ಬಾರಿ ಮತಕ್ಷೇತ್ರದಲ್ಲಿ ಕೇಂದ್ರದ ದುರಾಡಳಿತದ ಬಗ್ಗೆ ಹೇಳಿಕೊಳ್ಳಲು ಸಾಕಷ್ಟು ವಿಚಾರಗಳು ನಮ್ಮಲ್ಲಿದೆ ಎಂದರು. ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಜಿ.ಪಂ ಸದಸ್ಯ ಕೆ.ಕೆ ಶಾಹುಲ್ ಹಮೀದ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಉಪಸ್ಥಿತರಿದ್ದರು.

ಬಿಜೆಪಿ ಹೇಳಿದ್ದೇನು? ಮಾಡಿದ್ದೇನೆ? ಇದುವೇ ಚುನಾವಣಾ ಪ್ರಚಾರ ಎಜೆಂಡಾ: ಐವನ್ ಡಿಸೋಜಾ
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮಾತನಾಡಿ, ಕಾಂಗ್ರೆಸ್‌ಗೆ ಜಿಲ್ಲೆಯ 27 ವರ್ಷಗಳಿಂದ ಎಂಪಿ ಇಲ್ಲ, ಈ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದು ಬಿಜೆಪಿಯ ಭ್ರಷ್ಟಾಚಾರವನ್ನು ಜನರ ಬಳಿಗೆ ಕೊಂಡೊಯ್ಯಲಿದ್ದೇವೆ. ಬಿಜೆಪಿ ಹೇಳಿದ್ದೇನು? ಮಾಡಿದ್ದೇನು? ಇದುವೇ ಈ ಬಾರಿಯ ಕಾಂಗ್ರೆಸ್ ಚುನಾವಣಾ ಪ್ರಚಾರ ಎಜೆಂಡಾ ಎಂದರು.
ಸೈನಿಕರ ಸಾವಿನ ವಿಚಾರವನ್ನು ಬಿಜೆಪಿ ಪ್ರಚಾರತಂತ್ರಕ್ಕಾಗಿ ಬಳಸಿಕೊಳ್ಳುತ್ತಿದೆ. ಯಡಿಯೂರಪ್ಪ ಅವರು ಇದೇ ವಿಚಾರ ಮುಂದಿಟ್ಟು ಬಿಜೆಪಿ 22 ಸ್ಥಾನ ಗೆಲ್ಲಲಿದೆ ಎಂದು ಹೇಳಿಕೆ ನೀಡಿದ್ದು ಈ ಬಗ್ಗೆ ನಾವು ಚುನಾವಣಾಧಿಕಾರಿಗೆ ದೂರು ನೀಡಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಮೋದಿ ಆಡಳಿತದಲ್ಲಿ ಈ ದೇಶದಲ್ಲಿ ನಡೆದಿರುವ ಅತೀ ದೊಡ್ಡ ಹಗರಣ ಎಂದರೆ ರಫೇಲ್ ಹಗರಣ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.