ವೇಣೂರು ಐಟಿಐಯಲ್ಲಿ  ಬೃಹತ್  ರಕ್ತದಾನ ಶಿಬಿರ  

ವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ, ಹಳೆ ವಿದ್ಯಾರ್ಥಿ ಸಂಘ ಎಸ್.ಡಿ.ಎಂ. ಐಟಿಐ ವೇಣೂರು, ಗ್ರಾ. ಪಂ. ಕುಕ್ಕೇಡಿ, ಹಾಲು ಉತ್ಪಾದಕರ ಸಂಘ ಕುಕ್ಕೇಡಿ, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವೇಣೂರು, ಲಯನ್ಸ್ ಕ್ಲಬ್ ವೇಣೂರು, ಪಲ್ಗುಣಿ ಸೇವಾ ಸಂಘ ವೇಣೂರು, ಲಯನ್ಸ್ ಕ್ಲಬ್ ಕುಡ್ಲ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ಕುಕ್ಕೇಡಿ-ನಿಟ್ಟ್ಟಡೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ರಕ್ತದಾನ ಬೃಹತ್ ಶಿಬಿರ ವೇಣೂರು ಐಟಿಐ ಯಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ನ ಜಿಲ್ಲಾ ಸಂಯೋಜಕ  ಲ|ನಾಗೇಶ್ ಕುಮಾರ್  ಕಾರ್ಯಕ್ರಮ ಉದ್ಘಾಟಿಸಿ ರಕ್ತದಾನದ ಮಹತ್ವ ಹಾಗೂ ಪ್ರಯೋಜನೆಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ವೇಣೂರಿನ ಜ್ಯೋತಿಷಿ ಮೋಹನ್ ದಾಸ್ ಹೆಗ್ಡೆ ಹಾಗೂ ಕೆ.ಎಂ.ಸಿ ಮಂಗಳೂರು ಇಲ್ಲಿನ ವೈದ್ಯಾಧಿಕಾರಿಗಳಾದ ಡಾ|ನಯನಾ ರಕ್ತದಾನದ ಉಪಯುಕ್ತತೆಯ ಬಗ್ಗೆ ಮಾಹಿತಿಯನ್ನಿತ್ತರು. ಐಟಿಐ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಅಧ್ಯಕ್ಶತೆ ವಹಿಸಿದ್ದರು. ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ  ಸುಂದರ ಹೆಗ್ಡೆ ಬಿ.ಇ. ಸ್ವಾಗತಿಸಿ, ಐಟಿಐ ಕಿರಿಯ ತರಬೇತಿ ಅಧಿಕಾರಿ ಸತೀಶ್ ವಂದಿಸಿ,   ಕಿರಿಯ ತರಬೇತಿ ಅಧಿಕಾರಿ ಶ್ರೀಮತಿ ಜ್ಯೋತ್ಸ್ನಾ ನಿರ್ವಹಿಸಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಹರೀಶ್ ಆಳ್ವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವ್ವಿಚಾರಕ ದಿನೇಶ್, ವೇಣೂರು  ಲಯನ್ಸ್ ಕ್ಲಬ್ ಅದ್ಯಕ್ಷ ನಿತೇಶ್ ಕುಮಾರ್, ಪಲ್ಗುಣಿ ಸೇವಾ ಸಂಘ[  ವೇಣೂರು ಇದರ ಅಧ್ಯಕ್ಷ ವಿ.ಎಸ್.ಜಯರಾಜ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿನರಾಜ್ ಜೈನ್, ಲಯನ್ಸ್ ಕ್ಲಬ್ ಕುಡ್ಲ  ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಉಪಸ್ಥಿತರಿದ್ದರು.

10ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದ ಸಂಸ್ಥೆಯ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಐಟಿಐ ನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪದ್ಮಪ್ರಸಾದ್ ಬಸ್ತಿ ಸಂಘಟಿಸಿದ ಈ ಶಿಬಿರದಲ್ಲಿ ಒಟ್ಟು 154 ಯುನಿಟ್ ರಕ್ತ ಸಂಗ್ರಹಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.