HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸಿಯೋನ್ ಆಶ್ರಮದ ವಾರ್ಷಿಕೋತ್ಸವ

ನೆರಿಯ: ಇಲ್ಲಿಯ ಗಂಡಿಬಾಗಿಲು  ಸಿಯೋನ್ ಆಶ್ರಮದ ವಾರ್ಷಿಕೋತ್ಸವವನ್ನು ಮಾ.22 ರಂದು  ಸಂಭ್ರಮದಿಂದ ಆಚರಿಸಲಾಯಿತು.  ದಿವ್ಯಬಲಿಪೂಜೆಯನ್ನು ಗಂಡಿಬಾಗಿಲು ಚರ್ಚ್‌ನ ಧರ್ಮಗುರುಗಳಾದ ಫಾ. ಶಾಜಿ ವೆಟ್ಟಂತಡತ್ತಿಲ್‌ರವರು ನೆರವೇರಿಸಿದರು.
ನಂತರ  ನಡೆದ ಸಭಾಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ  ಯು.ಸಿ.ಪೌಲೋಸ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಶ್ರಮದ ವಾರ್ಷಿಕೋತ್ಸವದ  ಪ್ರಯುಕ್ತ ಎಲ್ಲರಿಗೂ ಶುಭ ಹಾರೈಸಿದರು.      ಮುಖ್ಯ  ಅತಿಥಿಗಳಾಗಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿಯನ್, ಗ್ರಾಮ ಪಂಚಾಯತು ಸದಸ್ಯರುಗಳಾದ  ಬೀನಾ,  ಮತ್ತಾಯಿ,  ಸೆಬಾಸ್ಟಿನ್ ಎಂ.ಜೆ., ಗಂಡಿಬಾಗಿಲು ಚರ್ಚ್‌ನ ಪಾಲನಾ ಸಮಿತಿ ಸದಸ್ಯರುಗಳಾದ ಜಾರ್ಜ್ ವಡಕ್ಕಿಲ್, ಬೇಬಿ ವಟ್ಟಪ್ಲಾಕೆಲ್, ಬೇಬಿ ಆಯಂಗುಡಿ, ಜೋಸೆಫ್ ಚೆಲಂವಟ್ಟಶೇರಿ ಹಾಗೂ ಸಂಸ್ಥೆಯ  ಟ್ರಸ್ಟಿ  ಸದಸ್ಯರಾದ ಮೇರಿ ಯು.ಪಿ. , ಆಶ್ರಮ ನಿವಾಸಿಗಳಾದ ಫ್ರಾನ್ಸಿಸ್ ಮತ್ತು ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟ್ರಸ್ಟೀ ಸದಸ್ಯ  ಸುಭಾಷ್ ಯು.ಪಿ., ಆಡಳಿತಾಧಿಕಾರಿ ಶೋಭಾ ಯು.ಪಿ.,  ಮ್ಯಾನೇಜರ್ ಸೌಮ್ಯ ಯು.ಪಿ., ಸಂಧ್ಯಾ ಸುಭಾಷ್,  ಸಿಬ್ಬಂದಿವರ್ಗದವರು,  ಆಶ್ರಮನಿವಾಸಿಗಳು , ಊರವರು  ಪಾಲ್ಗೊಂಡಿದ್ದರು. ಶೋಭಾ ಯು.ಪಿ. ಕಾರ್ಯಕ್ರಮ ನಿರೂಪಿಸಿ, ಸಿಬ್ಬಂದಿ ಜಿನ್ಸಿ  ವಂದಿಸಿದರು.
ವಾರ್ಷಿಕೋತ್ಸವದ ಪ್ರಯುಕ್ತ ಆಶ್ರಮನಿವಾಸಿಗಳಿಗೆ ವಿವಿಧ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಿದ್ದು, ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಭಾಕಾರ್ಯಕ್ರಮದ ನಂತರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ವಿದ್ಯಾರ್ಥಿಗಳಿಂದ ಮತ್ತು  ಅಧ್ಯಾಪಕರಿಂದ ಹಾಗೂ ಆಶ್ರಮದ ಸಿಬ್ಬಂದಿವರ್ಗದವರಿಂದ ಮತ್ತು ಆಶ್ರಮನಿವಾಸಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.