ವೇಣೂರು: ಬಾಹುಬಲಿ ಸ್ವಾಮಿಯ ರಥೋತ್ಸವ, ಧಾರ್ಮಿಕಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರಥೋತ್ಸವ ಸಮವಸರಣದ ಪ್ರತೀಕ: ಭಟ್ಟಾರಕ ಸ್ವಾಮೀಜಿ

ವೇಣೂರು: ಮೋಹವನ್ನು ಕ್ಷಯ ಮಾಡಿದಾಗ ಮೋಕ್ಷ ಪ್ರಾಪ್ರಿಯಾಗುತ್ತದೆ. ಕಷ್ಟ ಬಂದಾಗ ಎದುರಿಸಲು ನಮಗೆ ಶಕ್ತಿ ಬೇಕು. ಅದು ಆರಾಧನೆ, ರಥೋತ್ಸವ, ಪೂಜೆ-ಪುರಸ್ಕಾರಗಳಿಂದ ಬರುತ್ತದೆ. ರಥೋತ್ಸವ ಸಮವಸರಣದ ಪ್ರತೀಕ. ಅದು ಭಕ್ತಿ, ವಿನಯತೆ ಹಾಗೂ ಮಧುರತೆಯಿಂದ ಕೂಡಿರಲಿ ಎಂದು ಮೂಡಬಿದಿರೆ ಜೈನಮಠದ ಪೀಠಾಧಿಪತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ವೇಣೂರು ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ವತಿಯಿಂದ ಶ್ರೀ ಬಾಹುಬಲಿ ಯುವಜನ ಸಂಘ, ಭಾರತೀಯ ಜೈನ್ ಮಿಲನ್, ಶ್ರೀ ಬ್ರಾಹ್ಮೀ ಮಹಿಳಾ ಸಂಘ ಹಾಗೂ ಶ್ರೀ ಬಾಹುಬಲಿ ಬಾಲಿಕಾ ಸಂಘದ ಆಶ್ರಯದಲ್ಲಿ ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಮಾ.21 ರಂದು ರಾತ್ರಿ ಜರಗಿದ ಶ್ರೀ ಬಾಹುಬಲಿ ಸ್ವಾಮಿಯ ರಥೋತ್ಸವ ಸಮಾರಂಭದ ಧಾರ್ಮಿಕಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನ ಪ್ರಾಚಾರ್ಯ ಪ್ರೊ| ಗಣಪತಿ ಭಟ್ ಕುಳಮರ್ವ ಅವರು ಧಾರ್ಮಿಕ ಉಪನ್ಯಾಸ ನೀಡಿ, ವ್ಯಕ್ತಿಯ ವ್ಯಕ್ತಿತ್ವ ಬೇರೆ ಬೇರೆ ರೀತಿಯಲ್ಲಿರುತ್ತದೆ. ನಾವು ಹೇಗಿದ್ದೇವೆ ಹಾಗೆ ಪ್ರಪಂಚ ಇರುತ್ತದೆ. ಪ್ರಪಂಚ ನಮ್ಮ ಕನ್ನಡಿ ಇದ್ದಂತೆ. ಬಾಹುಬಲಿಯ ವ್ಯಕ್ತಿತ್ವ ಮತ್ತು ತ್ಯಾಗ ನಮಗೆಲ್ಲ ಮಾದರಿಯಾಗಲಿ ಎಂದರು.
ದಾರವಾಢ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಿ. ಜೀವಂಧರ ಕುಮಾರ್, ಶ್ರೀ ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಸಜೇಶ್ ಆರಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ
2018ರ ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಿ| ಡಾ| ಪಿ. ಅಂತಪ್ಪ ಆಳ್ವರವರ ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳಿಂದ ಹಾಗೂ ಬಡಕೋಡಿ ಹೊಸಮನೆ ದಿ| ಪಿ. ಅದಿರಾಜ ಶೆಟ್ಟಿಯವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮೌನಪ್ರಾರ್ಥನೆ
ಜೈನ್ ಮಿಲನ್‌ನ ಸದಸ್ಯರಾಗಿದ್ದ ಡಾ| ಶ್ರೀಧರ ಕಂಬಳಿ, ಡಾ| ಬಿ.ಪಿ. ಇಂದ್ರ ಹಾಗೂ ವಿ. ಧನಂಜಯ ಕುಮಾರ್ ಅವರ ಆತ್ಮಕ್ಕೆ ಮೌನಪ್ರಾರ್ಥನೆ ಮೂಲಕ ಚಿರಶಾಂತಿ ಕೋರಲಾಯಿತು.
ವೇಣೂರು ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿ, ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಬಿ. ಪ್ರಮೋದ್ ಕುಮಾರ್ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.