ಮತದಾನ ಜಾಗೃತಿಗಾಗಿ ಉದ್ಯೋಗ ತೊರೆದು ಬೈಕ್ ಏರಿದ ಯುವಕ

ಬೆಳ್ತಂಗಡಿ: ಬೆಂಗಳೂರು ಮೂಲದ ಬಸವರಾಜು ಎಸ್. ಕಲ್ಲುಸಕ್ಕರೆ ಇವರು ತನ್ನ ಎವೆಂಜರ್ ಬೈಕ್‌ನಲ್ಲಿ ಮತದಾನ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಸಂಚಾರ ಆರಂಭಿಸಿದ್ದಾರೆ. ಬೆಂಗಳೂರಿನಿಂದ ಆರಂಭಗೊಂಡ ಇವರ ಪ್ರಯಾಣ ಈಗಾಗಲೇ 21 ಜಿಲ್ಲೆಗಳನ್ನು ಮುಗಿಸಿದ್ದು, 22ನೇ ಜಿಲ್ಲೆಯಾಗಿ ಮಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿಯವರೆಗೆ 4ಸಾವಿರ ಕಿ.ಮೀ ಕ್ರಮಿಸಿರುವ ಬಸವರಾಜ್ ಮತದಾನ ಜಾಗೃತಿಗಾಗಿ ಉತ್ತಮ ವೇತನವಿದ್ದ ಉದ್ಯೋಗವನ್ನು ತೊರೆದಿದ್ದಾರೆ.
ಇವರು ಮಾರ್ಗ ಮಧ್ಯೆ ಸಿಗುವ ಸರಕಾರಿ ಶಾಲೆ, ಕಾಲೇಜು ಮತ್ತು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಮತದಾನ ಜಾಗೃತಿಯೊಂದಿಗೆ, ಕನ್ನಡ ಬಳಕೆ, ಕನ್ನಡ ಶಾಲೆ ಉಳಿಸುವುದು, ರಕ್ತದಾನ, ಗಿಡನೆಡುವುದು ಮೊದಲಾದವುಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇವರು ಮಾ.22 ರಂದು ಬೆಳ್ತಂಗಡಿ ನಗರ ಪಂಚಾಯತ್, ವೇಣೂರು, ಗುರುವಾಯನಕೆರೆಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸಿದರು.
ಶೇ.100 ಮತದಾನ ಉದ್ದೇಶ
ಸ್ವಾತಂತ್ರ್ಯ ದೊರೆತು 70 ವರ್ಷಗಳೇ ಕಳೆದರೂ ಈವರೆಗೆ ಶೇ.50-60 ರಷ್ಟು ಮತದಾನ ಆಗುತ್ತಿದೆ. ಶೇ.100 ರಷ್ಟು ಮತದಾನವಾಗಬೇಕೆಂಬ ಉದ್ದೇಶದಿಂದ ನಾನು ಉದ್ಯೋಗ ತೊರೆದು ಮತದಾನ ಜಾಗೃತಿ ಕಾರ್ಯದಲ್ಲಿ ತೊಡಗಿದ್ದೇನೆ.
ಬಸವರಾಜು ಎಸ್ ಕಲ್ಲುಸಕ್ಕರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.