ನಿಡಿಗಲ್: ಸಿರಿ ಜಾತ್ರಾ  ಮಹೋತ್ಸವ, ಧಾರ್ಮಿಕ ಸಭೆ

ನಿಡಿಗಲ್  :  ಭಕ್ತಿ, ಶ್ರಧ್ದೆ ಸಮರ್ಪಣಾ ಭಾವದಿಂದ ಭಗವಂತನಿಗೆ ನಮ್ಮನ್ನು ನಾವು ಅರ್ಪಣೆ ಮಾಡಿದಾಗ ಭಗವಂತ ಅನುಗ್ರಹ ಸಂಪತ್ತು ನೀಡುತ್ತಾನೆ ಎಂದು ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ನುಡಿದರು.  ಅವರು ನಿಡಿಗಲ್ ಲೋಕನಾಡು ಲೋಕನಾಥೇಶ್ವರ ದೇವಸ್ಥಾನದ ವರ್ಷಾವಧಿ ಸಿರಿ ಜಾತ್ರಾ  ಮಹೋತ್ಸವದ ಪ್ರಯುಕ್ತ ನಡೆದ   ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡಿದರು.

ಕಾರ್ಯಕ್ರಮದಲ್ಲಿ ನಾವೂರು ವೈದ್ಯ ಡಾ| ಪ್ರದೀಪ್. ಎ , ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನಪೂರ್ಣ ಛತ್ರ ವ್ಯವಸ್ಥಾಪಕ ಜಿ.ಸುಬ್ರಹ್ಮಣ್ಯ ಪ್ರಸಾದ್ , ತುಳು ಚಲನಚಿತ್ರ ಕಲಾವಿದ  ಅರವಿಂದ ಬೋಳಾರ್, ಕಿಶೋರ್.ಡಿ ಶೆಟ್ಟಿ ನಾಟಕ ರಚನೆಕಾರ ಸುರೇಶ್ ಮಂಜೇಶ್ವರ, ಲೋಕನಾಡು ದೇವಸ್ಥಾನದ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಉಗ್ರಾಣ ವ್ಯವಸ್ಥಾಪಕ ಬದರೀನಾಥ್ ಮತ್ತಿತರರು ಉಪಸ್ಥಿತರಿದ್ದರು.

ಲೋಕನಾಡು ಆಡಳಿತ ಸಮಿತಿ ಸದಸ್ಯ ಪ್ರವೀಣ್ ವಿ,ಜಿ ಸ್ವಾಗತಿಸಿ,   ಬೇಬಿ ಉಮೇಶ್ ವಂದಿಸಿ, ಅನುರಾಧ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.