ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ

ನಿಡಿಗಲ್: ಇಲ್ಲಿಯ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಹಾಗೂ ಸಿರಿ ಜಾತ್ರಾ ಮಹೋತ್ಸವವು ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಮಾ.20ರಂದು ಶ್ರೀದೇವರ ಉತ್ಸವ ನಡೆದು ರಾತ್ರಿ ಶ್ರೀ ಅಬ್ಬಗ ದಾರಗರ ಚೆನ್ನೆಮಣೆ ಆಟ , ದೈವಗಳ ನೇಮೋತ್ಸವ ಜರುಗಿತು. ಮಾ.21 ರಂದು ಶ್ರೀ ನಾಗಬ್ರಹ್ಮರ ಸನ್ನಿಧಿಯಲ್ಲಿ ಆಶ್ಲೇಷ ಬಲಿ-ಶ್ರೀ ನಾಗದರ್ಶನ ಸೇವೆ ನಡೆದು, ರಾತ್ರಿ ಕುಮಾರ ದರ್ಶನ, ದೇವರ ಉತ್ಸವ, ವಾರ್ಷಿಕ ನಡ್ವಾಲ್ ಸಿರಿ ಜಾತ್ರೆ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.