ಪ್ರಚಾರ ನಿರ್ಬಂಧ ಜಾಲತಾಣಗಳಿಗೂ ವಿಸ್ತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

3 ಗಂಟೆಯಲ್ಲಿ ಪ್ರಚಾರ ಸರಕು ತೆರವು| ಪಾಲನೆಗೆ ಟ್ವಿಟರ್, ಫೇಸ್‌ಬುಕ್, ಗೂಗಲ್ ಒಪ್ಪಿಗೆ

ಬೆಳ್ತಂಗಡಿ: ಮತದಾರರ ಮೇಲೆ ಕೊನೆಯ ಕ್ಷಣದಲ್ಲಿ ಪ್ರಭಾವ ಬೀರುವುದು ತಪ್ಪಿಸಲು ಚುನಾವಣಾ ವ್ಯವಸ್ಥೆಯಲ್ಲಿ ನಿಗದಿಯಾಗಿರುವ ಕೊನೆಯ 48 ಗಂಟೆಗಳ ಬಹಿರಂಗ ಪ್ರಚಾರ ನಿರ್ಬಂಧವನ್ನು ಸಾಮಾಜಿಕ ಮಾಧ್ಯಮಗಳಿಗೂ ವಿಸ್ತರಿಸಲಾಗಿದೆ

ಸೋಷಿಯಲ್ ಮಿಡಿಯಾಗಳಲ್ಲಿ ಈ ಮೌನದ ಅವಧಿಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಸರಕು ಕಾಣಿಸಿಕೊಳ್ಳುವಂತಿಲ್ಲ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯ ನೀತಿ ಸಂಹಿತೆ ಅಳವಡಿಸಿಕೊಂಡಿರುವ ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸ್‌ಆಪ್‌ಗಳು ಚುನಾವಣಾ ಆಯೋಗವು ಉಲ್ಲಂಘನೆ ಪ್ರಕರಣಗಳನ್ನು ಗಮನಕ್ಕೆ ತಂದ ಮೂರು ಗಂಟೆಯೊಳಗೆ ಅಂತಹ ಪ್ರಚಾರ ಸಾಹಿತ್ಯ/ ವಿಡಿಯೊವನ್ನು ತೆಗೆದು ಹಾಕುವುದಾಗಿ ಹೇಳಿವೆ.
ಭಾರತೀಯ ಅಂತರ್ಜಾಲ ಮತ್ತು ಮೊಬೈಲ್ ಒಕ್ಕೂಟ (ಐಎಎಂಎಐ) ಹಾಗೂ ಫೇಸ್‌ಬುಕ್, ವಾಟ್ಸ್‌ಆಪ್, ಗೂಗಲ್, ಶೇರ್‌ಚಾಟ್ ಸಂಸ್ಥೆಯ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. 1951 ರ ಜನ ಪ್ರತಿನಿಧಿ ಕಾಯಿದೆಯ 126ನೇ ವಿಧಿಯು ಮೌನದ ಅವಧಿ ಯನ್ನು ಸ್ಟಷ್ಟವಾಗಿ ಉಲ್ಲೇಖಿಸಿದ್ದು, ಮತದಾನಕ್ಕೂ ಮುನ್ನ 48 ಗಂಟೆಗಳ ಅವಧಿಯಲ್ಲಿ ಬಹಿರಂಗ ಪ್ರಚಾರವನ್ನು ನಿಷೇಧಿಸುತ್ತದೆ. ಈ ಕಾಯಿದೆಯಡಿ 48 ಗಂಟೆಗಳ ತರುವಾಯವೂ ಸಾಮಾಜಿಕ/ವಿಡಿಯೋಗಳಿದ್ದು ಉಲ್ಲಂಘನೆ ಪ್ರಕರಗಳು ಕಂಡು ಬಂದಲ್ಲಿ ಅಂತಹುವುಗಳನ್ನು ಮೂರು ಗಂಟೆಯೊಳಗೆ ತೆಗೆದುಹಾಕಲಾಗುವುದು ಎಂದು ಪ್ರಮುಖ ಸೋಷಿಯಲ್ ಮಿಡಿಯಾಗಳು ತಿಳಿಸಿವೆ. ಸಿನ್ಹಾ ಸಮಿತಿಯ ಶಿಫಾರಸಿನಂತೆ ಅವು ಈ ನಿಯಮ ಪಾಲನೆಗೆ ಒಪ್ಪಿವೆ ಎಂದು ಚುನಾವಣಾ ಆಯೋಗ ಹೇಳಿದೆ. ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗದ ಮಧ್ಯೆ ಐಎಎಂಐ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಆಯೋಗವು ಪಾರದರ್ಶಕತೆ ತರಲು ಪೇಯ್ಡ್ ರಾಜಕೀಯ ಜಾಹೀರಾತುಗಳ ಮೇಲೂ ಕಣ್ಣಿಟ್ಟಿದ್ದೆ.
ಟ್ವಿಟರ್ ಪ್ರವೇಶಿಸಿದ ಚುನಾವಣಾ ಆಯೋಗ
ಕಳೆದ ಲೋಕಸಭೆ ಚುನಾವಣೆಯಂತೆ ಈ ಬಾರಿಯೂ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರಲಿದ್ದು, ಪಕ್ಷಗಳು ಇವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಟ್ವಿಟರ್‌ನಲ್ಲಿ ಎಲೆಕ್ಷನ್ ಹವಾ ಜೋರಾಗುತ್ತಿದ್ದಂತೆಯೇ ಚುನಾವಣಾ ಆಯೋಗವು ಈ ಜಾಲತಾಣ ವೇದಿಕೆ ಪ್ರವೇಶಿಸಿದ್ದು @ECISVEEP ಟ್ವಿಟರ್ ಅಕೌಂಟ್ ತೆರೆದಿದೆ. ಜನಸಾಮಾನ್ಯರು ಚುನಾವಣೆ ಮಾಹಿತಿ ಕೋರಿ ಹಾಗೂ ಮತದಾರ ಪಟ್ಟಿಯ ಬಗೆಗಿನ ಗೊಂದಲಗಳಿದ್ದರೆ ಟ್ವಿಟರ್‌ನಲ್ಲಿಯೇ ಪ್ರಶ್ನೆ ಕೇಳಿ ಪರಿಹರಿಸಿಕೊಳ್ಳ ಬಹುದು. ದೇಶ್ ಕಾ ಮಹಾ ತೊಯ್ಯರ್ ಎಂಬ ಹ್ಯಾಶ್‌ಟಾಗ್‌ನೊಂದಿಗೆ ಮತದಾನ ಕುರಿತು ಜಾಗೃತಿ ಅಭಿಯಾನ ಕೈಗೊಂಡಿದೆ. ಖಾತೆ ತೆರೆದ ಒಂದು ಗಂಟೆಯೊಳಗೆ ಒಂದು ಸಾವಿರ ಫಾಲೋವರ್‌ಗಳನ್ನು ಹೊಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.