ಅಳದಂಗಡಿ:  ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬಾಲಾಲಯ ಪ್ರತಿಷ್ಠೆ

Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನ ಅಳದಂಗಡಿಯಲ್ಲಿ ಸುಮಾರು 1.25 ಕೋಟಿ ವೆಚ್ಚದಲ್ಲಿ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣಗೊಳ್ಳಲಿದ್ದು, ವೇದಬ್ರಹ್ಮಶ್ರೀ ಪೊಳಲಿ ಕೆ. ಅನಂತಪದ್ಮನಾಭ ಉಪಾಧ್ಯಾಯ ತಂತ್ರಿಗಳ ನೇತೃತ್ವದಲ್ಲಿ ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯಕ್ರಮ ಮಾ.21 ರಂದು ಜರುಗಿತು. ಬೆಳಿಗ್ಗೆ ಗಣಹೋಮ, ಗಣಪತಿ ಪ್ರತಿಷ್ಠೆ, ಜೀವಕಲಶಾಭಿಷೇಕ, ಪ್ರತಿಷ್ಠಾ ಪೂಜಾ ಪ್ರಾರ್ಥನೆ ನಡೆದು, ನಂತರ  ದೇವಳದ ಜೀರ್ಣೋದ್ಧಾರ ಕಾರ್ಯಗಳಿಗೆ ಭಕ್ತರಿಂದ ಪುಂಡಿಪಣವು ಕಾರ್ಯಕ್ರಮ ಜರುಗಿತು.

ಈ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಡಾ| ಪದ್ಮಪ್ರಸಾದ ಅಜಿಲ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಗಂಗಾಧರ ಮಿತ್ತಮಾರು, ಪ್ರಧಾನ ಅರ್ಚಕರಾದ ಎ. ಸೋಮನಾಥ ಮಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಶಶಿಧರ ಡೋಂಗ್ರೆ  , ಪ್ರಧಾನ ಕಾರ್ಯದರ್ಶಿ ಪಿ.ಹೆಚ್ ನಿತ್ಯಾನಂದ ಶೆಟ್ಟಿ ನೊಚ್ಚ, ಕೋಶಾಧಿಕಾರಿ ಅನಿಲ್ ಕುಮಾರ್ ಮಾಳಿಗೆಮನೆ, ಸಂಘಟನಾ ಕಾರ್ಯದರ್ಶಿ ಕೆ.ನಾರಾಯಣ ರಾವ್ ಕಾಪಿನಡ್ಕ, ಸ್ಥಾಪಕ ವಂಶಸ್ಥರಾದ ನಿರಂಜನ್ ರಾವ್ ಯರ್ಡೂರು, ಹೇಮಂತ ರಾವ್ ಯರ್ಡೂರು, ಕೆ. ರಾಮಚಂದ್ರ ರಾವ್‌ಕಾಪಿನಡ್ಕ, ಕೆ.ರಮಾನಂದ ರಾವ್ ಕೊಳಕ್ಕೆ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.