ಮಾಜಿ ಸಚಿವ ಧನಂಜಯ ಕುಮಾರ್‌ರಿಗೆ ನುಡಿನಮನ 

ವೇಣೂರು: ವೇಣೂರು ಹಾಗೂ ಮೂಡಬಿದ್ರೆ ಪರಿಸರದ ಅಭಿವೃದ್ಧಿಗೆ ಧನಂಜಯ ಕುಮಾರ್ ಶ್ರಮಿಸಿದ್ದರು. ಸಕಲ ದೋಷಗಳನ್ನು ಗೆದ್ದ ವೀತರಾಗ ಭಗವಂತನಿಗೆ ಬಸದಿಯಲ್ಲಿ ಅಭಿಷೇಕ ಮಾಡುತ್ತೇವೆ ಎಂದು ಮೂಡಬಿದ್ರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಅವರು ಮಾ.20 ರಂದು ವೇಣೂರಿನಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಇತ್ತೀಚೆಗೆ ಮೃತರಾದ ವಿ. ಧನಂಜಯ್ ಕುಮಾರ್ ಅವರ ಆತ್ಮಶಾಂತಿಗಾಗಿ ನಡೆದ 504 ಕಲಶ ಅಭಿಷೇಕ ಮಾಡಿದ ಬಳಿಕ ಮಾತನಾಡಿದರು.
ವಿಜಯರಾಜ ಅಧಿಕಾರಿ ಮಾತನಾಡಿ, ಬಾಲ್ಯದಿಂದಲೆ ನಾಯಕತ್ವ ಗುಣ ಹೊಂದಿದ್ದ ಧನಂಜಯ ಕುಮಾರ್ ಪ್ರತಿಭಾವಂತರಾಗಿದ್ದು ವೇಣೂರಿಗೆ ಸರ್ಕಾರದ ಅನೇಕ ಯೋಜನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ಅಖಿಲ ಭಾರತ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮಾತನಾಡಿ ಸರಳ ವ್ಯಕ್ತಿತ್ವ ಹಾಗೂ ಆದರ್ಶ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಧನಂಜಯ ಕುಮಾರ್ ಬಿ.ಜೆ.ಪಿ. ವಕ್ತಾರರಾಗಿ, ಸಂಸದೀಯ ಪಟುವಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ, ಸುರತ್ಕಲ್‌ನ ಮಾಜಿ ಶಾಸಕ ಎಂ. ಎನ್. ಅಡ್ಯಂತಾಯ ನುಡಿನಮನ ಸಲ್ಲಿಸಿದರು.
ವಿ. ಜೀವಂಧರ್ ಕುಮಾರ್ ಸ್ವಾಗತಿಸಿದರು. ಪವಿತ್ರ ವಿಕಾಸ್ ಧನ್ಯವಾದವಿತ್ತರು. ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಎಲ್. ಡಿ. ಬಳ್ಳಾಲ್ ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಕೆ. ಪ್ರತಾಪಸಿಂಹನಾಯಕ್, ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕೆ. ಜಯವರ್ಮರಾಜ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.