ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಸಂಪನ್ನ

ತಣ್ಣೀರುಪಂತ: ಅತೀ ಪ್ರಾಚೀನವಾದ ಭಾವಂತಬೆಟ್ಟು ಶ್ರೀ ಆದಿನಾಥ ಸ್ವಾಮಿ ಬಸದಿಯ ನವೀಕರಣ ಕಾರ್ಯ ಮತ್ತು ತನ್ನಿಮಿತ್ತ ಸ್ಥಾಪಿಸಲ್ಪಟ್ಟ ನೂತನ ಮಾನ ಸ್ತಂಭದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು, ನೂತನ ಚತುರ್ಮುಖಿ 1008ಆದಿನಾಥ ತೀರ್ಥಂಕರ ಜೈನ ಬಿಂಬದ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ.13 ರಿಂದ 17ರ ತನಕ ನಡೆಯಿತು.
ಪರಮ ಪೂಜ್ಯ 108 ಆಚಾರ್ಯ ಸನ್ನತಿ ಸಾಗರಮುನಿ ಮಹಾರಾಜರ ಹಾಗೂ ಪರಮ ಪೂಜ್ಯ 108 ಆಚಾರ್ಯ ಚಂದ್ರಪ್ರಭ ಸಾಗರ ಮುನಿ ಮಹಾರಾಜರ ಪರಮ ಪ್ರಿಯ ಶಿಷ್ಯರಾದ ಜೈನ ಧರ್ಮದ ಪ್ರಭಾವಕ ಪರಮ ಪೂಜ್ಯ 108 ಮುನಿ ವೀರಸಾಗರ ಮಹಾರಾಜರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಮತ್ತು ರಾಜಗುರು ಧ್ಯಾನ ಯೋಗಿ ಸ್ಪಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಯವರು ಶ್ರೀ ಜೈನ ಮಠ ಕಾರ್ಕಳ ಇವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆರವರ ದಿವ್ಯ ಉಪಸ್ಥಿತಿಯಲ್ಲಿ ವಿಧಿ-ವಿಧಾನಗಳೊಂದಿಗೆ ವೈಭವಯುತವಾಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸಮವಸರನದೊಂದಿಗೆ ಸಂಪನ್ನಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.