ಬತ್ತಿ ಹೋಗುತ್ತಿರುವ ನದಿ-ತೊರೆಗಳು: ಅಪಾಯದ ಮೂನ್ಸೂಚನೆ ನೀಡುತ್ತಿರುವ ಅಂತರ್ಜಲ ಮಟ್ಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದಿನೇ ದಿನೇ ಪ್ರಕೃತಿಯ ತಾಪಮಾನ ಏರುತ್ತಿದ್ದು ಹಿಂದೆ ಬಳ್ಳಾರಿ ಸಹಿತ ಉತ್ತರ ಕರ್ನಾಟಕ ಭಾಗದಲ್ಲಿ ಇರುತ್ತಿದ್ದ 45 ಡಿಗ್ರಿ ವರೆಗಿನ ತಾಪಮಾನ ಅಂತರ್ಜಾಲ ವ್ಯವಸ್ಥೆಯಲ್ಲಿ ನಮ್ಮ ಮೊಬೈಲ್‌ಗಳಲ್ಲೀ ಈಗ ದಾಖಲಾಗುತ್ತಿದೆ. ಮಳೆಗಾಲಕ್ಕೆ ಇನ್ನೂ 70 ದಿನಗಳು ಬಾಕಿ ಇರುವಂತೆಯೇ ಈಗಲೇ ಕೆರೆ, ನದಿ, ತೊರೆಗಳು ಭತ್ತಿ ಹೋಗಿದ್ದು ಅಪಾಯಕಾರಿ ಬೆಳವಣಿಗೆ ಎದುರಾಗಿದೆ. ಅಂತರ್ಜಲ ಮಟ್ಟ ತೀರಾ ಕುಸಿದಿದ್ದು, ಹಿಂದೆಲ್ಲಾ ಕೆರೆ ಬಾವಿಯ ಬದಲು ನೀರಿನ ಆಶ್ರಯಕ್ಕಾಗಿ ಕೊಳವೆ ಬಾವಿ ಕೈಹಿಡಿಯುತ್ತಿತ್ತು. ಇದೀಗ ಕರಾವಳಿ ಜಿಲ್ಲೆಯಲ್ಲೂ ಬಹುತೇಕ ಕಡೆ ೫೦೦ ಮೀಟರ್ ಆಳಕ್ಕೆ ಕೊಳವೆ ಬಾವಿ ತೋಡಿದರೂ ನಿರೀಕ್ಷಿತ ಪ್ರಮಾಣದ ನೀರು ಸಿಗುತ್ತಿಲ್ಲ. ಅಡಿಕೆ ತೋಟಗಳಿದ್ದಲ್ಲಿ ಕೆಲವೆಡೆ ಸಾಕಷ್ಟು ನೀರಾಶ್ರಯವಿದ್ದು ಇನ್ನೂ ಕೆಲವೆಡೆ ಕೃಷಿ ಬೆಳೆಗಳು ನೀರಿನ ಕೊರತೆ ಎದುರಿಸುತ್ತಿದೆ. ಬೇಕಾದಷ್ಟು ನೀರು ಇರುವವರು ಸ್ಪಿಂಕ್ಲರ್‌ಗಳ ಮೂಲಕ ನೀರು ಹಾರಿಸುವ ಬದಲು ಹನಿ ನೀರಾವಳಿ ಮಾರ್ಗ ಅನುಸರಿಸಿದರೆ ಭಾರೀ ನೀರು ಉಳಿಸಿದಂತಾಗಲಿದೆ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕಾಗಿದೆ.
ಮಳೆಕೊಲು ಮಾರ್ಗ ಅನುಸರಿಸುವುದು ಅನಿವಾರ್ಯ:
ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗುತ್ತಿರುವ ಕರಾವಳಿ ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಮಳೆಕೊಯ್ಲು ವಿಧಾನ ಅನುಸರಿಸುವುದು ಅನಿವಾರ್ಯವಾಗಿದೆ.
ಮಳೆಗಾಲ ಮುಗಿಯುತ್ತಿರುವಂತೆ ಅಲ್ಲಲ್ಲಿ ಹರಿದು ಪೂಲಾಗುವ ನೀರಿಗೆ ಕಟ್ಟಗಳನ್ನು ಹಾಕಿ ನೀರಿನ ಉಳಿತಾಯ, ಅ ಮೂಲಕ ಅಂತರ್ಜಲ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವಲ್ಲಿ ಜನ ಆಲೋಚಿಸಬೇಕಾಗಿದೆ. ನದಿ, ತೋಡುಗಳ ಪಾತ್ರದ ಜನರು ಒಂದೆಡೆ ಸೇರಿ ಸಮಿತಿಗಳ ಮೂಲಕ ತಮ್ಮ ತಮ್ಮ ಪ್ರದೇಶದಲ್ಲಿ ಹರಿದುಹೋಗುವ ನೀರಿಗೆ ಕಟ್ಟಗಳನ್ನು ಹಾಕುವ ಮೂಲಕ ಸಾಮೂಹಿಕವಾಗಿಪ್ರಯತ್ನಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.