ಬಳಂಜ: ಬದಿನಡೆ ಸಪರಿವಾರ ಶ್ರೀ ಬ್ರಹ್ಮದೇವರ ದೇವಸ್ಥಾನದ ಜಾತ್ರಾ ಮಹೋತ್ಸವದ  ಪ್ರಯುಕ್ತ ಧಾರ್ಮಿಕ ಸಭೆ 

ಬಳಂಜ: ಇಲ್ಲಿಯ ಬದಿನಡೆ ಸಪರಿವಾರ ಶ್ರೀ ಬ್ರಹ್ಮದೇವರ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ. 20ರಿಂದ ಮಾ.22 ರವರೆಗೆ ನಡೆಯಲಿದ್ದು, ಮಾ.20 ರಂದು ಬಾಲಕೃಷ್ಣ ಪಾಂಗಣ್ಣಾಯ ತಂತ್ರಿಯವರ ನೇತೃತ್ವದಲ್ಲಿ ಬೆಳಿಗ್ಗೆ ದೇವರ ಪ್ರಾರ್ಥನೆ ಪುಣ್ಯಹ ವಚನ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಹೋಮ, ಮೃತ್ಯುಂಜಯ ಹೋಮ ಹಾಗೂ ವಿವಿಧ ಗ್ರಾಮಗಳಿಂದ ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಿ, ಆಶೀರ್ವಚನ ನೀಡಿದರು.

ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಜನಜಾಗೃತಿ ವೇದಿಕೆ ನಿಕಟಪೂರ್ವಾಧ್ಯಕ್ಷ ವಸಂತ ಸಾಲ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಉದ್ಯಮಿ ರವಿಪೂಜಾರಿ ಮಜಲು, ಸದಾನಂದ ಪೂಜಾರಿ ಉಂಗಿಲಬೈಲು, ಸುಭಾಷ್ ಪುತ್ತೂರು, ತಾ.ಪಂ ಸದಸ್ಯೆ ಸೌಭಾಗ್ಯ ಬಜೆಗೋಳಿ, ರಜತ ಸಂಘ ಬೆಳ್ತಂಗಡಿ ಅಧ್ಯಕ್ಷ ಜಯಂತ ಮಡಿವಾಳ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಹರೀಶ್ ಪೂಂಜ, ಸಮಿತಿ ಕಾರ್‍ಯಧ್ಯಕ್ಷ ಹಾಗೂ ನ್ಯಾಯವಾದಿ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಸಮಿತಿ ಉಪಾಧ್ಯಕ್ಷ ಸತೀಶ್ ರೈ ಬಾರ್‍ದಡ್ಕ, ಕೋಶಾಧಿಕಾರಿ ರಾಜೇಂದ್ರ ಶೆಟ್ಟಿ ಕುರೆಲ್ಯ, ಕಾರ್ಯದರ್ಶಿ ಹಾಗೂ ವಲಯ ಮೇಲ್ವಿಚಾರಕಿ ಮಲ್ಲಿಕಾ, ಸಮಿತಿಯ ಸರ್ವ ಸದಸ್ಯರು ಸಹಕರಿಸಿದರು.
ರತ್ನಾಕರ ಶೆಟ್ಟಿ ತಾರಿದೊಟ್ಟು ಇವರ ಪ್ರಾರ್ಥನೆ ಬಳಿಕ ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಹೊಳ್ಳ ಮಜ್ಜೇನಿಬೈಲು ಸ್ವಾಗತಿಸಿದರು. ಬಳೆಂಜ ಶಾಲಾ ಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಹರೀಶ್ ದೇವಾಡಿಗ ಹಾನಿಂಜ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.