ಕಳಿಯ ಬಿಳಿಬೈಲು ಪರಿಸರದಲ್ಲಿ ಕುಡಿಯುವ ನೀರಿಗೆ ತತ್ವಾರ: ಜಿ. ಪಂ ಸಿಇಒ ಗೆ ನಾಗರಿಕರಿಂದ ಲಿಖಿತ ದೂರು

ಸಾಂಧರ್ಭಿಕ ಚಿತ್ರ

ಕಳಿಯ: ಕಳಿಯ ಗ್ರಾ.ಪಂ ವ್ಯಾಪ್ತಿಯ ಕಳಿಯ ಮೂರನೇ ಬ್ಲಾಕ್ ಬಿಳಿಬೈಲು ಎಂಬಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ನಾಗರಿಕರು ಜಿ.ಪಂ ಸಿಇಒ ಅವರಿಗೆ ಲಿಖಿತ ದೂರು ಸಲ್ಲಿಸಿ ಗಮನಸೆಳೆದಿದ್ದಾರೆ.
ಸಾರ್ವಜನಿಕ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಹಲವು ಬಾರಿ ಕಳಿಯ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಶಾಸಕರು ಮತ್ತು ಜಿ.ಪಂ ಸಿಇಒ ಅವರಿಗೂ ಮನವಿ ಸಲ್ಲಿಸಿದ್ದೆವು. ಈ ಬಗ್ಗೆ ಪೈಪ್‌ಲೈನ್ ಅಳವಡಿಸಿದ್ದರೂ ಇದುವರೆಗೆ ನಳ್ಳಿನೀರಿನ ಸಂಪರ್ಕವಾಗಿಲ್ಲ, ಅಲ್ಲದೆ ಕಾಮಗಾರಿ ಕಳಪೆಯೂ ಆಗಿದೆ. ಸಂಬಂಧಪಟ್ಟ ಇಂಜಿನಿಯರ್‌ಗಳು ಪರಿಶೀಲಿಸಿದ್ದರೂ ಯಾವುದೇ ಕ್ರಮ ಆಗಿಲ್ಲ. ಆದುದಂತೆ ಶೀಘ್ರ ಕ್ರಮ ಕೈಗೊಳ್ಳಿ ಎಂದು ಅರ್ಜಿದಾರರು ಭಿನ್ನವಿಸಿಕೊಂಡಿದ್ದಾರೆ. ಒಂದು ವೇಳೆ ಈ ಮನವಿಗೂ ಸಕಾಲಿಕ ಸ್ಪಂದನೆ ದೊರೆಯದಿದ್ದರೆ ಚುನಾವಣೆ ಬಹಿಷ್ಕಾರಕ್ಕೂ ನಾವು ಆಲೋಚಿಸಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.