ವಾರದಲ್ಲಿ3 ಮಂದಿ ಚಾಲಕರ ಸಾವು: ಉನ್ನತ ತನಿಖೆಗೆ ಸಿಐಟಿಯು ಆಗ್ರಹ

ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ವಾರದಲ್ಲಿ ಮೂರು ಸಿಬ್ಬಂದಿಗಳು ಸಾವನ್ನಪ್ಪಿದ್ದು ಅತ್ಯಂತ ಕಳವಳಕಾರಿ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಹೇಳಿದ್ದು, ಡಿಪೋ ಅಧಿಕಾರಿಗಳ ಮಾನಸಿಕ ಹಿಂಸೆ ಈ ಸಾವಿಗೆ ಕಾರಣವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
ಡಿಪೋದ ಹಲವಾರು ಹಗರಣ, ಅವ್ಯಾಹಾರಗಳ ಆಗರವಾಗಿದೆ. ಈ ಬಗ್ಗೆ ಈಗಾಗಲೇ ಅಲ್ಲಿಯ ಸಿಬ್ಬಂದಿ ಕಳೆದ ವರ್ಷ ವಿಡಿಯೋ ಚಿತ್ರೀಕರಣ ಮಾಡಿದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದೇ ಈ ಸಾವಿಗೆ ಕಾರಣವಾಗಿದೆ. ಡಿಪೋದ ಅವ್ಯವಸ್ಥೆಯ ಬಗ್ಗೆ ತನಿಖೆ ನಡೆಸುವ ಬದಲಾಗಿ ಸಿಬ್ಬಂದಿಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ಅಮಾನತು ಮಾಡಲಾಯಿತು. ಅದರ ಬದಲಿಗೆ ಅವ್ಯವಸ್ಥೆಯ ಬಗ್ಗೆ ಯಾವುದೇ ಬದಲಾವಣೆ ಆಗಿಲ್ಲ. ಸಿಬ್ಬಂದಿಗಳಿಗೆ ಅಗತ್ಯವಿರುವ ರಜೆ ನೀಡದೆ ಮನಬಂದಂತೆ ಹೆಚ್ಚುವರಿಯಾಗಿ ದುಡಿಸಿಕೊಳ್ಳುವ ಮೂಲಕ ಮಾನಸಿಕ ಹಿಂಸೆ ನೀಡಿರುವುದೇ ಸಿಬ್ಬಂದಿಗಳ ಸಾವಿಗೆ ಕಾರಣವಾಗಿದೆ. ಒಂದೇ ವಾರದಲ್ಲೇ ಮೂರು ಸಿಬ್ಬಂದಿಗಳ ಸಾವು ಅತ್ಯಂತ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿಐಟಿಯು ಬೆಳ್ತಂಗಡಿ ತಾ| ಅಧ್ಯಕ್ಷ ನ್ಯಾಯವಾದಿ ಶಿವಕುಮಾರ್ ಎಸ್. ಎಂ. ಕಾರ್ಯದರ್ಶಿ ವಸಂತ ನಡ, ಉಪಾಧ್ಯಕ್ಷ ಶೇಖರ್ ಲಾಯಿಲ ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.