ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಜಾತ್ರೋತ್ಸವ

ನಡ: ನಾಡಿನ ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಶ್ರೀ ಸದಾಶಿವ ರುದ್ರ ದೇವಸ್ಥಾನ ಸುರ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರ ಮಹೋತ್ಸವ  ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.
ಮಾ.15 ರಂದು ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ ಮಹಾಪೂಜೆ ರಾತ್ರಿ ರಂಗಪೂಜೆ ದೇವರ ಉತ್ಸವ ನಡೆಯಿತು. ಮಾ.16 ರಂದು ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ನಿತ್ಯಬಲಿ ಮೊದಲಾದ ಕಾರ್ಯಕ್ರಮಗಳು ಜರುಗಿತು. ಮಾ.17 ರಂದು ಮಹಾಪೂಜೆ, ನಿತ್ಯಬಲಿ, ಸಂಜೆ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ತರಲಾಯಿತು. ನಂತರ ಉತ್ಸವ ಹೊರಟು ವಸಂತಕಟ್ಟೆ ಪೂಜೆ ಜರುಗಿತು. ಮಾ.18 ರಂದು ಸೊಡಬಲಿ ಉತ್ಸವ ಬಳಿಕ ಮಹಾಪೂಜೆ ಜರುಗಿತು. ಮಾ.19 ರಂದು ಬೆಳಗ್ಗೆ ದರ್ಶನ ಬಲಿ ಉತ್ಸವ, ಮಹಾಪೂಜೆ ರಾತ್ರಿ ಉತ್ಸವ ಹೊರಟು ನೃತ್ಯ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಶಯನೋತ್ಸವ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಅನುವಂಶಿಕ ಆಡಳಿತ ಮೊಕ್ತೇಸರ ಸುಭಾಶ್ವಂದ್ರ ಸುರ್ಯಗುತ್ತು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಸತೀಶ್ಚಂದ್ರ ಸುರ್ಯಗುತ್ತು, ಬಿ. ಮುನಿರಾಜ ಅಜ್ರಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.