ಅರಿಪ್ಪಾಡಿ ಮಠ ಕಲಾವೇದಿಕೆ ಸಭಾಂಗಣಕ್ಕೆ ಶಿಲಾನ್ಯಾಸ

ಉಜಿರೆ: ಉಜಿರೆ ಶ್ರೀ ಅರಿಪ್ಪಾಡಿ ಮಠ ಪರಿಸರದಲ್ಲಿ ನೂತನವಾಗಿ ನಿಮಾಣಗೊಳ್ಳಲಿರುವ ಕಲಾವೇದಿಕೆ ಸಭಾಂಗಣಕ್ಕೆ ಮಾ.18 ರಂದು ಬೆಳಿಗ್ಗೆ ಎಡನೀರು ಮಠದ ಶೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿ, ಶಿಲಾನ್ಯಾಸ ನೆರವೇರಿಸಿದರು.
ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಪ್ರದರ್ಶನಗಳಿಗೆ ಉಚಿತ ಅವಕಾಶ ಕಲ್ಪಿಸಿಕೊಡುತ್ತಿರುವುದು ಅರಿಪ್ಪಾಡಿತ್ತಾಯರ ಉದಾರಗುಣ. ಕಲೆ,ಸಂಗೀತ, ಯಕ್ಷಗಾನ ಕಾರ್ಯಕ್ರಮಗಳ ಮೂಲಕ ಕಲಾರಾಧನೆ ನಿರಂತರವಾಗಿ ನಡೆಯಲೆಂದು ಆಶಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಅರಿಪ್ಪಾಡಿ ಮಠದ ಬಾಲಕೃಷ್ಣ ಅರಿಪಾಡಿತ್ತಾಯರು ಶ್ರೀಗಳವರಿಗೆ ತುಳಸಿಹಾರ, ಫಲಪುಷ್ಪ ಕಾಣಿಕೆ ಸಮರ್ಪಿಸಿ ಗೌರವಿಸಿದರು. ಡಾ| ಇ.ಮಹಾಬಲ ಭಟ್, ಅನಂತಕೃಷ್ಣ ರಾವ್, ಉಜಿರೆ ಅಶೋಕ ಭಟ್, ದಿಶಾ ಅರುಣ್ ಕುಮಾರ್, ವಸಂತ ಶರ್ಮ, ಅರಿಪ್ಪಾಡಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.