ಅರಿಪ್ಪಾಡಿ ಮಠದಲ್ಲಿ ಸನ್ಮಾನ-ಅಭಿವಂದನೆ, ತಾಳಮದ್ದಳೆ- ಬಯಲಾಟ ಯಕ್ಷಗಾಯನ-ಯಕ್ಷನೃತ್ಯ

ಸಂಪತ್ತು ಹೇಗೆ ವ್ಯಯಿಸುತ್ತಿದ್ದಾರೆ ಎಂಬುದು ಮುಖ್ಯ: ಕೇಶವಾನಂದ ಭಾರತಿ ಸ್ವಾಮೀಜಿ

ಉಜಿರೆ: ಸಂಪತ್ತು ಹೇಗೆ ಬಂತು ಎಂಬುದು ಮುಖ್ಯವಲ್ಲ, ವ್ಯಕ್ತಿ ಸಂಪತ್ತನ್ನು ಹೇಗೆ ಉಪಯೋಗ ಮಾಡುತ್ತಿದ್ದಾನೆ ಎಂಬುದು ಮುಖ್ಯ. ನಮ್ಮ ನಡೆ ಜೀವನ ಕ್ರಮ ಭಗವಂತನ ಸಂತೃಪ್ತಿಗೆ ಪಾತ್ರವಾಗಬೇಕು ಎಂದು ಶ್ರೀ ಆದಿಶಂಕರಾಚಾರ್ಯ ಶ್ರೀ ತೋಟಕಾಚಾರ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ನುಡಿದರು.
ಉಜಿರೆ ಅರಿಪ್ಪಾಡಿ ಮಠದ ಆಶ್ರಯದಲ್ಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ಇದರ ವಿಂಶತಿ ವರ್ಷದ ಜಂಟಿ ಸಹಯೋಗದೊಂದಿಗೆ ಮಾ. 16-17 ರಂದು ನಡೆದ, ಸಾಧಕರಿಗೆ ಸನ್ಮಾನ-ಅಭಿವಂದನೆ-ತಾಳಮದ್ದಳೆ- ಬಯಲಾಟ ಯಕ್ಷಗಾಯನ-ಯಕ್ಷನೃತ್ಯ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಮಾತನಾಡಿ, ಉಜಿರೆ ಜನಾರ್ದನ ದೇವಸ್ಥಾನ ಕೇಂದ್ರೀಕರಿಸಿ ವರ್ಷಕ್ಕೆ 50-60 ಯಕ್ಷಗಾನ ಸಂಬಂಧಿ ಕಾರ್ಯಕ್ರಮ ನಡೆಯುತ್ತಿದೆ. ಯಕ್ಷ ಕಲೆ ಉಳಿವಿಗಾಗಿ ಕ್ಷೇತ್ರದಿಂದ ಕೂಡ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದರು.
ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ. ಎಸ್ ಪ್ರಭಾಕರ್ ಮಾತನಾಡಿ, ಯಕ್ಷಗಾನದ ಬಗ್ಗೆ ಯುವ ಜನಾಂಗ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಸಂತಸದ ವಿಚಾರ ಎಂದರು.
ವೇದಿಕೆಯಲ್ಲಿ ಅರಿಪ್ಪಾಡಿ ಮಠದ ಆಡಳಿತ ವಿಶ್ವಸ್ಥ ಎ ಬಾಲಕೃಷ್ಣ ಅರಿಪ್ಪಾಡಿತ್ತಾಯ ಗೌರವ ಉಪಸ್ಥಿತರಿದ್ದರು.

ಸನ್ಮಾನ, ಪುರಸ್ಕಾರ, ಗುರುವಂದನೆ:
ಈ ಸಮಾರಂಭದಲ್ಲಿ ಶ್ರೀ ಅರಿಪ್ಪಾಡಿ ಮಠಕ್ಕೆ ಪಾದಸ್ಪರ್ಷಗೈದ ಕೇಶವಾನಂದ ಭಾರತೀ ಶ್ರೀ ಪಾದಂಗಳವರಿಗೆ ಅರಿಪ್ಪಾಡಿ ಕ್ಷೇತ್ರದ ವತಿಯಿಂದ ಭಿಕ್ಷೆ,ಪಾದಪೂಜೆ ಮತ್ತು ಗುರುವಂದನೆ ನಡೆಯಿತು. ಕರ್ನಾಟಕ ಸರಕಾರದಿಂದ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಿ ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾರ್ ದಂಪತಿಯನ್ನು ಸನ್ಮಾನಿಸಲಾಯಿತು. ಯಕ್ಷ ಕಲಾ ಪೋಷಣೆಯೊಂದಿಗೆ ಸರಕಾರಿ ಅಧಿಕಾರಿಯಾಗಿ ಅತ್ಯುತ್ತಮ ಸೇವೆ ನೀಡಿದ ಬಿಡಿಎ ನಿವೃತ ಚೇರ್‌ಮೆನ್ ಡಾ.ಟಿ ಶ್ಯಾಮ ಭಟ್ಟ ಅವರಿಗೆ ಸನ್ಮಾನ ನಡೆಯಿತು. ಬೆಳ್ಲಿಯ ಮಾನಪತ್ರದ ಜೊತೆಗೆ ಅರಿಪ್ಪಾಡಿ ಮಠದ  ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ವತಿಯಿಂದಲೂ ಅವರಿಗೆ ವಿಶೇಷ ಸ್ಮರಣಿಗೆ ನೀಡಲಾಯಿತು. ಯಕ್ಷನೃತ್ಯ ಪ್ರದರ್ಶನ ನಡೆಸಿಕೊಟ್ಟ ಯುವ ಪ್ರತಿಭೆ ರಂಜಿತಾ ಎಲ್ಲೂರು ಅವರಿಗೆ ಪುರಸ್ಕಾರ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.