ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕಿಯರಿಗೆ ಸನ್ಮಾನ.

 

 

ಉನ್ನತ ಶಿಕ್ಷಣ,ಸಹನೆ, ಸಂಸ್ಕೃತಿಯೊಂದಿಗೆ, ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಎದುರಿಸುವ ಮೂಲಕ ಸಮರ್ಥರಾಗ ಬೇಕು. ಪ್ರೊ.ಶ್ರೀಮತಿ ಶಕುಂತಲಾ ಬಿ.ಸಹಾಯಕ ಪ್ರಾಧ್ಯಾಪಕರು ಉಜಿರೆ.

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ  ಹಳೆಕೋಟೆ ಬೆಳ್ತಂಗಡಿ, ಯುವ ವೇದಿಕೆ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ತಾಲೂಕು ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮಾ.17 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ನಡೆಯಿತು. ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಉಜಿರೆ ಶ್ರೀ. ಕ್ಷೇತ್ರ.ಧ.ಮಂ.ಕಾಲೇಜು ಸಹಾಯಕ ಪ್ರಾಧ್ಯಾಪಕಿ ಶಕುಂತಲಾ ಬಿ ಮಾತನಾಡುತ್ತಾ ಮಹಿಳೆಯರು ಉನ್ನತ ಶಿಕ್ಷಣ,ಸಹನೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಳಾಗಬೇಕು. ಹಾಗೂ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾತ್ಮ ಕೃತ್ಯಗಳನ್ನು ತಡೆಯುವ ಮೂಲಕ ಮಹಿಳೆಯರು ಸಂಘಟಿತರಾಗ ಬೇಕು ಎಂದು ಹೇಳಿದರು. ಕನ್ನಿಕಾ ಪದ್ಮ ಗೌಡ ಬೆಳಾಲು ಕಾರ್ಯ ಕ್ರಮವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ  ಶೋಭಾ ನಾರಾಯಣ ಗೌಡ ಸಭಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಸೋಮೇ ಗೌಡ ಜೆ, ಪ್ರ.ಕಾರ್ಯದರ್ಶಿ ಮೋಹನ ಗೌಡ, ತಾಲೂಕು ಗೌಡರ ಯಾನೆ ಒಕ್ಕಲಿಗರ ಯುವ ವೇದಿಕೆ ಸೇವಾ ಸಂಘದ ಅಧ್ಯಕ್ಷ ಯಶವಂತ ಗೌಡ ಬೆಳಾಲು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಹಾಗೂ ಮಹಿಳಾ ವೇದಿಕೆ ಗೌರವ ಅಧ್ಯಕ್ಷೆ  ಉಷಾ ಲಕ್ಷ್ಮಣ ಗೌಡ, ತಾಲೂಕು ಮಹಿಳಾ ವೇದಿಕೆ ಕಾರ್ಯದರ್ಶಿ.   ಗೀತಾ ರಾಮಣ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಿಳಾ ಸಾಧಕರಿಗೆ ಸನ್ಮಾನ : ಸಮಾಜ ಸೇವೆಗಾಗಿ  ವೇದಾವತಿ ಜನಾರ್ಧನ ಗೌಡ ನಿಡ್ಲೆ, ನಾಟಿ ವೈದ್ಯೆ,  ದೇಜಮ್ಮ ಕಾಯರ್ತಡ್ಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು  ವೇದಾವತಿ,ಹಾಗೂ  ಅನುರಾದ ಎಸ್.ಗೌಡ ವಾಚಿಸಿದರು.ಈ ಸಂದರ್ಭದಲ್ಲಿ ಮಹಿಳೆಯರಿಗೆ ವಿವಿಧ ರೀತಿಯ ಅಟೋಟ ಸ್ಪರ್ಧೆ ಗಳನ್ನು ಹಮ್ಮಿಕೊಂಡಿದ್ದು, ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು .ವಿಜೇತರ ಪಟ್ಟಿಯನ್ನು ಜ್ಯೋತಿ ಮಿತ್ತಬಾಗಿಲು ಓದಿದರು. ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.ಕು.ಚಿತ್ತಾರ ಬೆಳಾಲು ಪ್ರಾರ್ಥನೆ ಮಾಡಿದರು. ಉಷಾ ಲಕ್ಷ್ಮಣ ಗೌಡ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯದರ್ಶಿ ಗೀತಾ ರಾಮಣ್ಣ ಗೌಡ ಸ್ವಾಗತಿಸಿದರು.ಶ್ರೀಮತಿ ಮೀನಾಕ್ಷಿ ಮಹಾಬಲ ಗೌಡ, ಗೀತಾ ಪ್ರಜ್ವಲ್ ಗೌಡ ಕೊಯ್ಯೂರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಸಂಘದ ಉಪಾಧ್ಯಕ್ಷೆಯಾರಾದ  ಭಾರತಿ ಧರ್ಣಪ್ಪ ಗೌಡ ಕೊಂದೋಡಿ,  ಸುಭಾಷಿಣಿ ಜನಾರ್ದನ ಗೌಡ ಕುಳಾಯಿ,ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.ತಾಲೂಕಿನ ಎಲ್ಲಾ ಗ್ರಾಮದ ಮಹಿಳಾ ವೇದಿಕೆ ಪದಾಧಿಕಾರಿಗಳು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.