ಉಜಿರೆ:”ಶ್ರೀ ಕೃಷ್ಣ ಸಂಧಾನ” ಯಕ್ಷಗಾನ ತಾಳಮದ್ದಳೆ 

ಉಜಿರೆ: ಇಲ್ಲಿಯ  ಅರಿಪ್ಪಾಡಿ ಮಠ ಮತ್ತು ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ “ಶ್ರೀ ಕೃಷ್ಣ ಸಂಧಾನ”(  ತ್ರಿವಿಧ ಪಾತ್ರಾನುಸಂಧಾನ) ಪ್ರಸಂಗ  ಯಕ್ಷಗಾನ ತಾಳಮದ್ದಳೆ  ಕಾರ್ಯಕ್ರಮವು   ಮಾ. 16ರಂದು ನಡೆಯಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಬಲಿಪ ಪ್ರಸಾದ್ ಭಟ್ ನೆರವೇರಿಸಿದರು.

 ಹಿಮ್ಮೇಳದಲ್ಲಿ  ದ್ವಂದ್ವ ಹಾಡುಗಾರಿಕೆಯಲ್ಲಿ ಬಲಿಪ ಪ್ರಸಾದ್ ಭಟ್, ಪುಂಡಿಕಾಯಿ  ಗೋಪಾಲಕೃಷ್ಣಭಟ್ , ಮುಮ್ಮೇಳದಲ್ಲಿ ಶ್ರೀ ಕೃಷ್ಣನಾಗಿ  ವಾಸುದೇವ ರಂಗ ಭಟ್, ವಿದುರನಾಗಿ ಕೆ ಸುರೇಶ ಕುದ್ರೆಂತ್ತಾಯ , ತತ್ವವಾದಿ ಕೌರವನಾಗಿ ವಿದ್ವಾನ್ ಉಮಾಕಾಂತ ಭಟ್, ನೀತಿವಾದಿ ಕೌರವನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಛಲವಾದಿ ಕೌರವನಾಗಿ ಉಜಿರೆ ಅಶೋಕ ಭಟ್  ಭಾಗವಹಿಸಿದ್ದರು.

ಚೆಂಡೆಯಲ್ಲಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಮದ್ದಳೆಯಲ್ಲಿ ಬಿ ಜನಾರ್ದನ ತೋಳ್ಪಾಡಿತ್ತಾಯ, ಚಕ್ರತಾಳದಲ್ಲಿ ಬಿ ಸತೀಶ ತೊಳ್ಪ್ಪಾಡಿತ್ತಾಯರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.