ನ್ಯಾಯತರ್ಪು: ಯಕ್ಷಗಾನ ತಾಳಮದ್ದಳೆ

ನ್ಯಾಯತರ್ಪು: ಇಲ್ಲಿಯ ಹಾಕೋಟೆ  ಹೇಮಲತಾ ಮತ್ತು ಸಿದ್ದಪ್ಪ ಗೌಡ ದಂಪತಿ ನೂತನವಾಗಿ ನಿರ್ಮಿಸಿದ ‘ತುಳಸಿ ನಿಲಯ‘ ಇದರ ಗ್ರಹ ಪ್ರವೇಶ ಹಾಗೂ ಸತ್ಯ ನಾರಾಯಣ ಪೂಜೆ  ಕಾರ್ಯಕ್ರಮವು ಮಾ.16 ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಹ ಪ್ರವೇಶದ ಪ್ರಯುಕ್ತ ಸಂಜೆ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ“ಸುಭದ್ರ ಕಲ್ಯಾಣ”ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ ಮತ್ತು ಗಿರೀಶ್ ರೈ ಕಕ್ಕೆಪದವು, ಚಂಡೆ ಮದ್ದಳೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಗುರುಪ್ರಸಾದ್ ಬೊಳಿಂಜಡ್ಕ, ಚಕ್ರತಾಳದಲ್ಲಿ ರಾಜೇಂದ್ರ ಕೃಷ್ಣ, ಮುಮ್ಮೆಳದಲ್ಲಿ, ವಾಸುದೇವ ಸಾಮಗ ಮಲ್ಪೆ, ಶಂಭು ಶರ್ಮ ವಿಟ್ಲ, ದಿನೇಶ್ ಶೆಟ್ಟಿ ಕಾವಳಕಟ್ಟೆ, ರಾಮ ಜೋಯಿಸ ಬೆಳ್ಳಾರೆ, ಮಾಧವ ಬಂಗೇರ ಕೋಳತ್ತಮಜಲು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.