ಮಾ. 17: ಉಜಿರೆಯಲ್ಲಿ “ಅಯಾನ್ ಟ್ರಾವೆಲ್ಸ್ ಲಿಮಿಟೆಡ್”, “ಚಲ್‌ ಸಫರ್ ಡಾಟ್‌ಕಾಮ್” ಸಂಸ್ಥೆ ಆರಂಭ

ಉಜಿರೆ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಪ್ರಖ್ಯಾತ “ಅಯಾನ್ ಟ್ರಾವೆಲ್ಸ್ ಪ್ರೈವೆಟ್ ಲಿಮಿಟೆಡ್” ಸಂಸ್ಥೆ ತಮ್ಮ ಸೇವೆಯನ್ನು ಇದೀಗ ಉಜಿರೆಗೆ ವಿಸ್ತರಿಸುತ್ತಿದ್ದು ಇದರ ನೂತನ ಕಚೇರಿ ವಿಶ್ವಮಾನ್ಯ ಶೈಕ್ಷಣಿಕ ನಗರಿ ಉಜಿರೆಯ ವಿಶ್ವಾಸ ಸಿಟಿಸೆಂಟರ್ ಬಿಲ್ಡಿಂಗ್‌ನಲ್ಲಿ ಮಾ. 17  ರಂದು ಪ್ರಾರಂಭವಾಗುತ್ತಿದೆ.
ಫ್ಲೈಟ್ ಟಿಕೆಟ್, ಬಸ್ಸು, ರೈಲು, ಮತ್ತು ಅತ್ಯಾಧುನಿಕ ಖಾಸಗಿ ವಾಹನಗಳ ಸೇವೆ ನೀಡುವ ಮೂಲಕ ಈ ಸಂಸ್ಥೆ ಬಹುವಿಧ ಪ್ರವಾಸ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಲಿದೆ. ಚಲ್‌ ಸಫರ್ ಡಾಟ್ ಕಾಮ್ ಎಂಬ ಬ್ರ್ಯಾಂಡ್ ಹೆಸರಿನೊಂದಿಗೆ 2007 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ ಈ ಹೆಸರಾಂತ ಟ್ರಾವೆಲಿಂಗ್ ಸಂಸ್ಥೆಯ ಮೂಲಕ ಫ್ಲೈಟ್ ಟಿಕೆಟ್ ವ್ಯವಸ್ಥೆ, ಸಿಂಗಲ್ ಸ್ಟಾರ್‌ನಿಂದ ಪ್ರಾರಂಭಿಸಿ ಸವೆನ್ ಸ್ಟಾರ್ ಹೊಟೇಲ್‌ಗಳಲ್ಲಿ ತಂಗುವ ವ್ಯವಸ್ಥೆ, ರಜಾಕಾಲದಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮೇತ ಪ್ರವಾಸ ಪ್ಯಾಕೇಜ್‌ಗಳು, ವೀಸಾ ಸೇವಾ ಸೌಲಭ್ಯ, ಪಾಸ್‌ಪೋರ್ಟ್ ಸೇವೆ, ಲಕ್ಸುರಿ ಬಸ್ಸು ಪ್ರಯಾಣ ವವಸ್ಥೆ ಸೌಲಭ್ಯ ನೀಡಲಿದೆ. ಕೆಎಸ್‌ಟಿಡಿಸಿ ಪ್ಯಾಕೇಜ್, ಜಂಗಲ್ ಲೋಡ್ಜ್ ಮತ್ತು ರೆಸೋರ್ಟ್ಸ್, ಅಂತಾರಾಷ್ಟ್ರೀಯ ಟೂರ್‍ಸ್, ನೇಚರ್ ಹೋಲಿಡೇಸ್, ಎಡ್ವೆಂಚರ್ ಹೋಲಿಡೇಸ್, ಪಿಲಿಗ್ರಿಮೇಜ್ ಹೋಲಿಡೇಸ್, ಹೆರಿಟೇಜ್ ಹೋಲಿಡೇಸ್, ಐಸ್‌ಲೇಂಡ್ ಪೇಕೇಜ್, ಎಮ್.ಐ.ಸಿ.ಇ ಪೇಕೇಜಸ್, ಕಾರ್ಪೋರೇಟ್ ಪ್ಯಾಕೇಜಸ್, ಸ್ಕೂಲ್ ಪ್ಯಾಕೇಜಸ್, ಕ್ರ್ಯೂಸ್ ಬುಕ್ಕಿಂಗ್ಸ್, ವೀಸಾ, ಟ್ರಾವೆಲ್ ಇನ್ಶ್ಯೂರೆನ್ಸ್, ಫೊರೆಕ್ಸ್, ಇತ್ಯಾಧಿ ಪ್ರಮುಖ ಸೌಲಭ್ಯಗಳನ್ನು ಈ ಸಂಸ್ಥೆ ಜನತೆಗೆ ನೀಡಿ ಈಗಾಗಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಮಾರಂಭದಲ್ಲಿ ಯಾರ್‍ಯಾರು?
ಈ ಸಂಸ್ಥೆಯನ್ನು ಮಾ.17 ರಂದು ಪೂರ್ವಾಹ್ನ 11.00 ಗಂಟೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀ ವಿಜಯರಾಘವ ಪಡುವೆಟ್ನಾಯ ಉದ್ಘಾಟನೆ ನಡೆಸಲಿದ್ದಾರೆ. ಸಮಾರಂಭದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್ ಪ್ರಭಾಕರ್, ಉಜಿರೆ ಸೈಂಟ್ ಆಂಟೊನಿ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡಿಸೋಜಾ. ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ, ಎಸ್‌ಡಿಎಂ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಟಿ.ಎನ್ ಕೇಶವ, ಉಜಿರೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಹಳೆಪೇಟೆ ಇದರ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಬಿ.ಎಮ್ ಅಬ್ದುಲ್ ಹಮೀದ್, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋಧ್ಯೋಗ ಸಂಸ್ಥೆ ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್ ಜಿ.ವಿ ಮೊದಲಾದ ಗಣ್ಯರು ಭಾಗಿಯಾಗಲಿದ್ದಾರೆ. ಅಯಾನ್ ಟ್ರಾವೆಲ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಯು ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಟ್ಲಾಸ್ ಉಮ್ರಾ ಸಂಸ್ಥೆ:
ಭಾರತ ಸರಕಾರದ ಮಾನ್ಯತೆ ಪಡೆದಿರುವ ಪ್ರವಾಸಿ ಸಂಸ್ಥೆ “ಅಟ್ಲಾಸ್ ಉಮ್ರಾ” ಇದರ ಸೇವೆ ಇದೀಗ ಉಜಿರೆಯಲ್ಲಿ ಪ್ರಾರಂಭವಾಗುತ್ತಿದೆ. ಚಲ್‌ ಸಫರ್ ಡಾಟ್‌ಕಾಮ್ ಮತ್ತು ಅಯಾನ್ ಟ್ರಾವೆಲ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ರಾಜಧಾನಿ ಬೆಂಗಳೂರಿನಿಂದ ತಮ್ಮ ವ್ಯವಹಾರ ಕ್ಷೇತ್ರವನ್ನು ಉಜಿರೆಗೆ ವಿಸ್ತರಣೆಗೊಳಿಸುತ್ತಿದ್ದು ತಮ್ಮ ಟೂರ್‍ಸ್ ಟ್ರಾವೆಲ್ಸ್ ಸೇವೆ ಜೊತೆಗೆ “ಅಟ್ಲಾಸ್ ಉಮ್ರಾ” ಸಂಸ್ಥೆಯ ಮೂಲಕ ದೊರೆಯುವ ವಿಶ್ವಾಸಾರ್ಹ ಧಾರ್ಮಿಕ ಶ್ರದ್ಧಾ ಕೇಂದ್ರ ಪ್ರವಾಸ ಸೇವೆಯನ್ನು ಭಕ್ತಿ ಭಾವ ಸಂಗಮದೊಂದಿಗೆ ನೀಡಲು ಬದ್ಧವಾಗಿದೆ.
ವರ್ಷಕ್ಕೆ 1 ಲಕ್ಷ ಮಂದಿಗೆ ಉಮ್ರಾ ಯಾತ್ರೆ:
ವರ್ಷಕ್ಕೆ ಕನಿಷ್ಠವೆಂದರೂ 1 ಲಕ್ಷ ಮಂದಿಯನ್ನು ಪವಿತ್ರ ಉಮ್ರಾ ಯಾತ್ರೆಗೆ ಸುವ್ಯವಸ್ಥಿತವಾಗಿ ಕಳುಹಿಸಿಕೊಡುತ್ತಿರುವ ಈ ಸಂಸ್ಥೆಯ ಮೂಲಕ ಸೂಪರ್ ಸೇವರ್ ಪೇಕೇಜ್, ಅವ್ವಲ್ ಪೇಕೇಜ್, ಆಲಾ ಪೇಕೇಜ್, ಅಝೀಮ್ ಪೇಕೇಜ್, ರಂಝಾನ್ ಪೇಕೇಜ್, ಶಾಬಾನ್-ರಂಝಾನ್ ಪೇಕೇಜ್,ವ್ಯವಸ್ಥೆಗಳು ಇವೆ.
ಇದರ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಅಲ್‌ಹಾಜ್ ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ತಂಙಳ್ ಉಜಿರೆ ದುಆ ಪ್ರಾರ್ಥನೆ ಮೂಲಕ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಯಾರ್‍ಯಾರು?
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಪ್ರಖ್ಯಾತ ಉದ್ಯಮಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್‍ಸ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ, ಎಸ್‌ಎಮ್‌ಆರ್ ಗ್ರೂಪ್ ಆಫ್ ಕಂಪೆನೀಸ್ ಮತ್ತು ಎಸ್‌ಎಮ್‌ಆರ್ ಶಿಕ್ಷಣ ಸಮೂಹ ಸಂಸ್ಥೆಗಳ ಚೇರ್‌ಮೆನ್ ಆಗಿರುವ ಅಲ್‌ಹಾಜ್ ಎಸ್‌ಎಮ್ ರಶೀದ್ ಹಾಜಿ, ಉಜಿರೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಹಳೆಪೇಟೆ ಇಲ್ಲಿನ ಮುದರ್ರಿಸ್ ಅಲ್‌ಹಾಜ್ ಅಬ್ಬಾಸ್ ಮದನಿ, ಆಡಳಿತ ಸಮಿತಿ ಅಧ್ಯಕ್ಷ ಅಲ್‌ಹಾಜ್ ಬಿ.ಎಮ್ ಅಬ್ದುಲ್ ಹಮೀದ್, ಮಂಜೊಟ್ಟಿ ಸ್ಟಾರ್‌ಲೈನ್ ಆಂಗ್ಲಮಾಧ್ಯಮ ಶಾಲಾ ಸಮಿತಿ ಚೇರ್‌ಮೆನ್ ಸಯ್ಯಿದ್ ಹಬೀಬ್ ಸಾಹೇಬ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನೂ ಅಯಾನ್ ಟ್ರಾವೆಲ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಯು ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.