HomePage_Banner_
HomePage_Banner_
HomePage_Banner_

ಸೇವಾನಿಕೇತನದಲ್ಲಿ ಒತ್ತಡ ಗಾಯ ನಿರ್ವಹಣೆ ಮಾಹಿತಿ ಕಾರ್ಯಕ್ರಮ

ಕನ್ಯಾಡಿ: ಸೇವಾಭಾರತಿಯ ಸೇವಾನಿಕೇತನದಲ್ಲಿ  ಒತ್ತಡ ಗಾಯ ನಿರ್ವಹಣೆ ಮತ್ತು ಬೆನ್ನುಮೂಳೆ ಅಪಘಾತದ ಬಗ್ಗೆ ಪಾಲಕರಿಗೆ ಹಾಗೂ ಬೆನ್ನುಮೂಳೆ ಅಪಘಾತಕ್ಕೊಳಗಾದವರಿಗೆ ಮಾಹಿತಿ ಕಾರ್ಯಾಗಾರ  ಮಾ.15ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿ ಸೇವಾಭಾರತಿ ಕನ್ಯಾಡಿ ಅಧ್ಯಕ್ಷ ಕೆ.ವಿನಾಯಕ ರಾವ್ ಮಾತಾನಾಡಿ ಭಯ ತೊರೆದು ಜೀವಿಸಬೇಕು. ಜೀವನದಲ್ಲಿ ಏಳು ಬೀಳುಗಳು ಸಾಮಾನ್ಯ. ಆದುದರಿಂದ ಬೆನ್ನುಹುರಿ ಅಪಘಾತಕ್ಕೊಳಗಾದವರು ಕಷ್ಟವೆಂದು ಭಾವಿಸದೆ ಜೀವನದಲ್ಲಿ ಮುನ್ನುಗಬೇಕು ಎಂದರು.
ಒತ್ತಡ ಗಾಯ ನಿರ್ವಹಣೆಯ ಬಗ್ಗೆ ಸೌತಡ್ಕ ಸೇವಧಾಮ ಪುನಶ್ಚೇತನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಕು.ಉಷಾ.ಬಿ ಮಾಹಿತಿ ನೀಡಿ  ಒತ್ತಡ ಗಾಯಗಳಾದ ಸಂದರ್ಭದಲ್ಲಿ ಕಾಳಜಿ ವಹಿಸಬೇಕು, ಮಲಗುವ ಸ್ಥಿತಿ ಆಗಾಗ ಬದಲಾಯಿಸಬೇಕು ಮತ್ತು ಸುದೀರ್ಘವಾಗಿ ಮಲಗಿಕೊಂಡು ಹಾಗೂ ಕುಳಿತುಕೊಂಡಿರಬಾರದು . ಬೆನ್ನುಮೂಳೆ ಅಪಘಾತಕ್ಕೊಳಗಾದವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೆಡಿಕಲ್ ಕಿಟ್ ಕೋರಿ ಮನವಿ ಪತ್ರ ನೀಡಿದ್ದಲ್ಲಿ ಅಗತ್ಯ ಔಷಧಿ, ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯ ಇಲಾಖೆಯು ಜಿಲ್ಲೆಯ ಎಲ್ಲ ಕೇಂದ್ರಗಳಿಗೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.
ಸೇವಾಭಾರತಿಯ ಟ್ರಸ್ಟಿಗಳಾದ ಕುಸುಮಾಕರ್ ಗೌಡ, ಸೇವಾಭಾರತಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.