ಸಿರಿ ಗ್ರಾಮೋದ್ಯೋಗ ಸಂಸ್ಥೆ: ವಿಶ್ವ ಮಹಿಳಾ ದಿನಾಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್‌ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಶೈಲಜಾ, ನಿರ್ದೇಶಕರು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇವರು ಮಾತನಾಡಿ ಸಮಾಜದಲ್ಲಿ ಕೇವಲ ಹಣ ಅಂತಸ್ತಿನಿಂದ ಗುರುತಿಸಲ್ಪಡದೆ, ತ್ಯಾಗ ಸೇವಾಮನೋಭಾವ, ಛಲಬಿಡದ ಪ್ರಯತ್ನದಿಂದ ಸಾಧನೆಯ ಶಿಖರವನ್ನೇರಬಹುದು ಎಂದು ತಿಳಿಸಿದರು.
ಸಂಸ್ಥೆಯ ಲೆಕ್ಕ ಪತ್ರ ವಿಭಾಗದ ಯೋಜನಾಧಿಕಾರಿ, ಯೋಜನೆಯ ದತ್ತಾಂಶ ವಿಭಾಗದ ಯೋಜನಾಧಿಕಾರಿ, ಕಛೇರಿ ಪರಿವೀಕ್ಷರು, ಬೆಳ್ತಂಗಡಿ ಯೋಜನಾ ಕಛೇರಿಯ ಕಾರ್ಯಕರ್ತರು, ಸಿರಿ ಸಿಬ್ಬಂದಿಗಳು ಹಾಗೂ ಘಟಕ ಸದಸ್ಯರು ಉಪಸ್ಥಿತರಿದ್ದರು, ಕು.ಮಂಜುಳಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ರೂಪ ಸ್ವಾಗತಿಸಿ, ಶ್ರೀಮತಿ ಸುಮಲತಾ ವಂದಿಸಿದರು.
ಉತ್ಪಾದನಾ ಘಟಕಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಸಾಧನೆಗೈದ 4 ಮಂದಿ ಮಹಿಳೆಯರಾದ ಪಣಕಜೆ ಆಹಾರೋತ್ಪನ್ನ ಘಟಕದ ಬೇಬಿ, ಬೆಳಾಲ್ ರಾಸಾಯನಿಕ ಉತ್ಪನ್ನ ಘಟಕದ ಶ್ರೀಮತಿ ವಿಜಯ, ರಾಜ್ ಮಹಲ್ ಟೆಕ್ಸ್ ಟೈಲ್ ಫಿನಿಶಿಂಗ್ ವಿಭಾಗದ ಶ್ರೀಮತಿ ಸಂಧ್ಯಾ ಹಾಗೂ ರಾಜ್ ಮಹಲ್ ರೆಕ್ಸಿನ್ ಘಟಕದ ಶ್ರೀಮತಿ ಶ್ವೇತಾರವರನ್ನು ಸಂಸ್ಥೆಯ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.