
ಬೆಳ್ತಂಗಡಿ: ಹಿರಿಯಡ್ಕದಿಂದ ಪೆರ್ಡೂರುಗೆ ಬರುತ್ತಿದ್ದ ಕಾರೊಂದು ಪಕ್ಕಾಲು ತಿರುವು ಬಳಿ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಮೂವರ ಪೈಕಿ ಮಾಚಾರಿನ ಪ್ರಶಾಂತ್ ಬಿ ಯವರು ಚಿಕಿತ್ಸೆಗೆ ಸ್ಪಂದಿಸದೆ ಮಾ. 13 ರಂದು ಕೊನೆಯುಸಿರೆಳೆದಿದ್ದಾರೆ.
ಈ ಅಪಘಾತದಲ್ಲಿ ಕನ್ಯಾಡಿಯ ಈಗಾಗಲೇ ಪ್ರಶಾಂತ್ ಜಿ.ಐ ಮೃತಪಟ್ಟಿದ್ದು, ಕಾರಿನಲ್ಲಿದ್ದ ರಾಜೇಶ್, ಪ್ರಸಾದ್ ದಿಡುಪೆ ಮತ್ತು ಪ್ರಶಾಂತ ಬಿ. ಮಾಚಾರು ತೀವ್ರ ಗಾಯಗೊಂಡಿದ್ದರು. ಇವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಮಾಚಾರಿನ ಬದನಾಜೆ ನಿವಾಸಿ ಬಾಬು ನಾಯ್ಕರ ಪುತ್ರ ಪ್ರಶಾಂತ ಬಿ. ಯವರು ಚಿಕೆತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದೆ.