ಅರಣ್ಯ ಹಕ್ಕು ಕಾಯ್ದೆಯ ಮಾಹಿತಿ ಕಾರ್ಯಾಗಾರ 

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಕಾಶ ವಂಚನೆಯಾಗಿದೆ: ಹರೀಶ್ ಪೂಂಜ

ಬೆಳ್ತಂಗಡಿ: ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ 13 ವರ್ಷಗಳಾದರೂ ಕೂಡ ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗದೆ ಇರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಾಹಿತಿಯ ಕೊರತೆಯೆ ಕಾರಣ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಮಂಟಪದಲ್ಲಿ ನಡೆದ ಅರಣ್ಯ ಹಕ್ಕು ಕಾಯ್ದೆಯ ಮಾಹಿತಿ ಕಾರ್ಯಾಗಾರ ಮತ್ತು ಅರಣ್ಯವಾಸಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಾ, ಸಾಮುದಾಯಿಕ ಹಕ್ಕುಗಳನ್ನು ಪಡೆಯಲು ಅರ್ಜಿ ಸಲ್ಲಿಸಿದಾಗ ಕಡತವನ್ನು ಅರಣ್ಯ ಇಲಾಖೆ ಅರಣ್ಯ ಭವನಕ್ಕೆ ಕಳುಹಿಸುವುದಾದರೆ ಅರಣ್ಯ ಹಕ್ಕು ಸಮಿತಿಯ ಅಧಿಕಾರ ವ್ಯಾಪ್ತಿ ಏನು ಎಂದು ಪ್ರಶ್ನಿಸಿದರು. ನೀತಿ ಸಂಹಿತೆ ಮುಗಿದ ತಕ್ಷಣ ನಾವೆಲ್ಲರೂ ಒಟ್ಟಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳೋಣ, ಯಾವುದೆ ಕುಟುಂಬಗಳಿಗೆ ಅನ್ಯಾಯ ಆಗದಂತೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳೋಣ ಎಂದು ತಿಳಿಸಿದರು. ಶ್ರೀನಿವಾಸ್ ಉಜಿರೆ, ತಾ. ಪಂ. ಮಾಜಿ ಸದಸ್ಯ ಜಯಂತ್ ಕೋಟ್ಯಾನ್, ತಾ. ಪಂ. ಉಪಾಧ್ಯಕ್ಷೆ ವೇದಾವತಿ, ತಾ. ಪಂ. ಸದಸ್ಯರಾದ ಸುಧೀರ್ ಆರ್ ಸುವರ್ಣ, ಕೊರಗಪ್ಪ ಗೌಡ ಅರಣೆಪಾದೆ, ವಸಂತಿ, ಅಮಿತಾ, ಧನಲಕ್ಷ್ಮಿ, ಗ್ರಾ. ಪಂ. ಸದಸ್ಯರಾದ ರತ್ನಾ ಶಿಬಾಜೆ, ಕೇಶವ ದಿಡುಪೆ, ಧರ್ಮಸ್ಥಳ ಸಹಕಾರಿ ಸಂಘದ ನಿರ್ದೆಶಕ ಉಮನಾಥ್ ಧರ್ಮಸ್ಥಳ, ಶಿರ್ಲಾಲು ಮಿಲ್ಕ್ ಸೊಸೈಟಿ ನಿರ್ದೇಶಕ ಶೀನಪ್ಪ ಮಲೆಂಕಿಲ ಮೊದಲಾದವರು ಉಪಸ್ಥಿತರಿದ್ದರು. ಹರೀಶ್ ಎಳನೀರ್ ಸ್ವಾಗತಿಸಿ ವಂದಿಸಿದರು.
ಕಾನೂನು ಚೌಕಟ್ಟಿನಲ್ಲಿ ಹೋರಾಡಿದ ಫಲವಾಗಿ ಕಾರ್ಕಳ ತಾಲೂಕಿನಲ್ಲಿ ಕಾಯ್ದೆ ಯಶಸ್ವಿಯಾಗಿದೆ:
ರಾಜ್ಯ ಮಲೆಕುಡಿಯ ಸಂಘದ ಮುಖಂಡ ಶ್ರೀಧರ್ ಗೌಡ ಈದು ಮಾತನಾಡಿ, ಅರಣ್ಯವಾಸಿ ಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಬೇಡ. ಅರಣ್ಯ ಹಕ್ಕು ಪತ್ರ ತಿರಸ್ಕಾರ ಆಗಿದ್ದರೂ ಕೂಡ ಇತರ ಜಮೀನು ಇದ್ದಾಗ ಒಕ್ಕಲೆಬ್ಬಿಸಲು ಸಾಧ್ಯ ಇಲ್ಲ, ಅರಣ್ಯ ಜಾಗದಲ್ಲಿ ಹಕ್ಕು ಪತ್ರವು ಇಲ್ಲದೆ ಇತರ ಜಮೀನೂ ಇಲ್ಲದೆ ಇದ್ದಾಗ ಸಮಸ್ಯೆ ಆಗುತ್ತದೆ. ಅಂತಹ ಕುಟುಂಬಗಳು ಕಡಿಮೆ ಪ್ರಮಾಣದಲ್ಲಿ ಇರುವಂತಹದ್ದು. ಆ ಅರ್ಜಿಗಳನ್ನು ವಿಶೇಷ ಸಭೆ ನಡೆಸಿ ಹಕ್ಕು ಪತ್ರ ನೀಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಿರುವ ಪರಿಣಾಮ ಕಾರ್ಕಳ ತಾಲೂಕಿನಲ್ಲಿ ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗಿದೆ ಎಂದರು.

ಅರಣ್ಯ ಹಕ್ಕುಪತ್ರ ಮಂಜೂರಾತಿ ಅರಣ್ಯ ಹಕ್ಕುಸಮಿತಿದ್ದೇ ಹೊರತು ಅರಣ್ಯ ಇಲಾಖೆಯದ್ದಲ್ಲ:
ಅರಣ್ಯ ಹಕ್ಕು ಪತ್ರ ಮಂಜೂರು ಮಾಡಲು ಅಧಿಕಾರ ಇರುವುದು ಅರಣ್ಯ ಹಕ್ಕು ಸಮಿತಿಗಳಿಗೇ ಹೊರತು ಅರಣ್ಯ ಇಲಾಖೆಗಲ್ಲ. ಗ್ರಾಮ, ಉಪವಿಭಾಗೀಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸ್ವೀಕರಿಸಿರುವ ಪ್ರಕ್ರಿಯೆಯೇ ಸರಿಯಾಗಿ ನಡೆದಿಲ್ಲ ಎಂಬ ನಿರ್ಣಯ ಮಾಡಿ ಹೊಸ ಅರ್ಜಿಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರಣ್ಯ ಹಕ್ಕು ಕಾಯ್ದೆಯಲ್ಲಿ ಇಲ್ಲ. ತಜ್ಞರ ವರದಿಯ ಆಧಾರದ ಮೇಲೆ ವನ್ಯ ಜೀವಿಗಳ ಆವಾಸ ಸ್ಥಾನ ಹೊರತು ಪಡಿಸಿ ಉಳಿದ ಎಲ್ಲಾ ರೀತಿಯ ಅರಣ್ಯಗಳಲ್ಲಿ ಹಕ್ಕುಪತ್ರ ನೀಡಬಹುದು. ಇತರ ಕಂದಾಯ ಜಮೀನು ಇದ್ದರೂ ಕೂಡ ಅರಣ್ಯ ಹಕ್ಕು ಪತ್ರ ನೀಡಬೇಕು.
ಅಶೋಕ್ ಕುಮಾರ್ ಸಮಗ್ರ ಗ್ರಾಮೀಣ ಆಶ್ರಮ ಉಡುಪಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.