ಪೆರ್ಡೂರು ಬಳಿ ಕಾರು ಅಪಘಾತ: ಕನ್ಯಾಡಿಯ ಯುವಕ ಪ್ರಶಾಂತ್ ಮೃತ್ಯು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಹಿರಿಯಡಕದಿಂದ ಪೆರ್ಡೂರುಗೆ ಬರುತ್ತಿದ್ದ ಕಾರೊಂದು ಪಕ್ಕಾಲು ತಿರುವು ಬಳಿ ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿ ಯುವಕ ಮೃತಪಟ್ಟ ಧಾರುಣ ಘಟನೆ ಮಾ.12 ರಂದು ಸಂಭವಿಸಿದೆ.
ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿ ಶ್ರೀಮತಿ ಲಲಿತಾ ಈಶ್ವರ್ ದಂಪತಿಗಳ ಏಕೈಕ ಪುತ್ರ, ಪ್ರಶಾಂತ .ಜಿ.ಐ( 23ವ) ಈ ದುರ್ಘಟನೆಯಲ್ಲಿ ಮೃತಪಟ್ಟ ನತದೃಷ್ಟ ಯುವಕರಾಗಿದ್ದಾರೆ. ಕಾರಿನಲ್ಲಿದ್ದ ರಾಜೇಶ್, ಪ್ರಸಾದ್ ದಿಡುಪೆ, ಪ್ರಶಾಂತ ಬಿ. ಮಾಚಾರು ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಿರಿಯಡಕ ಮುತ್ತೂರಿನಲ್ಲಿರುವ ಟಿನ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಸಂಜೆ 5 ಗಂಟೆ ಹೊತ್ತಿಗೆ ಹಿರಿಯಡಕದಿಂದ ಪೆರ್ಡೂರುಗೆ ಕಾರಿನಲ್ಲಿ ಹೋಗುತ್ತಿದ್ದರು. ಪ್ರಶಾಂತ್ ಅವರು ಕಾರನ್ನು ಚಾಲನೆ ಮಾಡುತ್ತಿದ್ದರು. ಕಾರು ಪೆರ್ಡೂರುಗೆ ಸಮೀಪದ ಪಕ್ಕಾಲು ಎಂಬಲ್ಲಿಗೆ ಬರುತಿದ್ದಂತೆ ಇಲ್ಲಿಯ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ಸಮೀಪದ ಗದ್ದೆಗೆ ಉರುಳಿ ಬಿದ್ದಿತ್ತೆನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ಶಬ್ದ ಕೇಳಿದ ಹತ್ತಿರದ ಮನೆಯವರು ಕೂಡಲೇ ಬಂದು ಕಾರಿನ ಒಳಗೆ ಸಿಲುಕಿದ್ದವರನ್ನು ಹೊರಗೆಳೆದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮೊದಲೇ ಚಾಲಕ ಪ್ರಶಾಂತ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆನ್ನಲಾಗಿದೆ.
ಮೃತ ಪ್ರಶಾಂತ ಜಿ.ಐ ಅವರು ತಂದೆ ಈಶ್ವರ್, ತಾಯಿ ಲಲಿತಾ, ಸಹೋದರಿ ಶೃತಿ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.