ತೆಂಕಕಾರಂದೂರು: ದೇವರಾಯ ಕಾಮತ್ ಗುಂಡೇರಿ ನಿಧನ

Advt_NewsUnder_1
Advt_NewsUnder_1
Advt_NewsUnder_1

ತೆಂಕಕಾರಂದೂರು: ರಾಜಕೀಯ, ಧಾರ್ಮಿಕ, ಕೃಷಿ, ಜಾನಪದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ತೆಂಕಕಾರಂದೂರು ಗ್ರಾಮದ ಗುಂಡೇರಿ ನಿವಾಸಿ ದೇವರಾಯ ಕಾಮತ್(83ವ.) ಅವರು ಮಾ. 12 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪ್ರಾರಂಭದಲ್ಲಿ ಬೆಳ್ತಂಗಡಿಯಲ್ಲಿ ಹೊಟೇಲ್ ಉದ್ಯಮಿಯಾಗಿ, ತೆಂಕಕಾರಂದೂರು ಭಜನಾ ಮಂಡಳಿಯಲ್ಲಿ ಅಧ್ಯಕ್ಷರಾಗಿ, ಮಿತ್ರಯುವಕ ಮಂಡಲದ ಅಧ್ಯಕ್ಷರಾಗಿ, ಸದಸ್ಯರಾಗಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಂದರ್ಭ ಸಕ್ರಿಯವಾಗಿ ತೊಡಗಿಸಿಕೊಂಡವರಾಗಿದ್ದರು.
ಬೆಳ್ತಂಗಡಿ ಜಿಎಸ್‌ಬಿ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಯಕ್ಷಗಾನ, ತಾಳಮದ್ದಳೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಎಲ್ಲಾ ಜಾತಿ ಧರ್ಮಗಳ ಯುವಕರನ್ನು ಒಗ್ಗೂಡಿಸಿ ಕಟ್ಟೆಯಲ್ಲಿ ಮಿತ್ರ ಯುವಕ ಮಂಡಲ ಎಂಬ ಸಂಘಟನೆ ಸ್ಥಾಪಿಸಿ ಯುವಕರನ್ನು ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ತೊಡಗುವಂತೆ ಪ್ರೇರಕರಾಗಿದ್ದರು. ಹೈನುಗಾರಿಕೆಯನ್ನೂ ಮಾಡುತ್ತಾ ಪ್ರಗತಿಪರ ಕೃಷಿಕರಾಗಿ ಮಾದರಿ ರೈತರಾಗಿ ಹೆಸರುವಾಸಿಯಾಗಿದ್ದರು. ಕರಾವಳಿಯ ಜಾನಪದ ಕಲೆಯಾದ ಕಂಬಳ ಕ್ರೀಡೆಯಲ್ಲಿ ಕೋಣಗಳನ್ನು ಕಟ್ಟುವ ಪರಿಣತಿ ಹೊಂದಿದ್ದ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಜಯಾ ಡಿ ಕಾಮತ್ ಸಹಿತ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ, ಕೆ ನಾರಾಯಣ ರೈ ಕಾರಂದೂರು, ವಿಠಲ ಹೆಗ್ಡೆ, ತಾ.ಪಂ ಮಾಜಿ ಸದಸ್ಯ ಧರ್ಣಪ್ಪ ಪೂಜಾರಿ ಬಳೆಂಜ, ಬಿಜೆಪಿ ವಿಭಾಗೀಯ ಸಹಪ್ರಭಾರಿ ಪ್ರತಾಪಸಿಂಹ ನಾಯಕ್, ಗ್ರಾ.ಪಂ ಅಧ್ಯಕ್ಷೆ ದೇವಕಿ, ಸದಸ್ಯರಾದ ಹೇಮಂತ್, ಗುರುರಾಜ್ ಹೆಗ್ಡೆ, ಪಡಂಗಡಿ ಸಹಕಾರಿ ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಎಸ್‌ಡಿಪಿಐ ಬೆಳ್ತಂಗಡಿ ತಾ| ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಮೊದಲಾದ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.