ಮಾ.15-20: ಸುರ್ಯ ಜಾತ್ರೋತ್ಸವ

Advt_NewsUnder_1
Advt_NewsUnder_1
Advt_NewsUnder_1

ನಡ: ನಾಡಿನ ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಶ್ರೀ ಸದಾಶಿವ ರುದ್ರ ದೇವಸ್ಥಾನ ಸುರ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರ ಮಹೋತ್ಸವ ಮಾ.15ರಿಂದ ಮಾ.20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಪ್ರೋ| ಸತೀಶ್ಚಂದ್ರ ಸುರ್ಯಗುತ್ತು ತಿಳಿಸಿದ್ದಾರೆ.
ಮಾ.15ರಂದು ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದ್ದು, ಮಾ.16ರಿಂದ ಮಾ.19ರವರೆಗೆ ಗಣಹೋಮ, ರಂಗಪೂಜೆ, ಕಲಶಾಭೀಷೇಕ, ದೇವರ ಉತ್ಸವ, ವಸಂತ ಕಟ್ಟೆ ಪೂಜೆ, ಸೊಡರ ಬಲಿ ಉತ್ಸವ, ಕೆರೆಕಟ್ಟೆ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಮಾ.19ರಂದು ಬೆಳಗ್ಗೆ ದರ್ಶನ ಬಲಿ ಉತ್ಸವ, ಮಹಾಪೂಜೆ, ರಾತ್ರಿ ಉತ್ಸವ ಹೊರಟು ನೃತ್ಯ ಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಶಯನೋತ್ಸವ. ಮಾ.20ರಂದು ಕವಟೋದ್ಘಾಟನೆ, ಕಲಶಾಭೀಷೇಕ, ಸಂಜೆ ಯಾತ್ರಾ ಹೋಮ, ಅವಭೃತ ಸ್ನಾನ, ರಾತ್ರಿ ದೈವಗಳ ನೇಮ ಜರುಗಲಿದೆ.
ಮಾ.17 ರಂದು ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್‌ಗೆ ಗೌರವಾರ್ಪಣೆ ನಡೆಯಲಿದ್ದು, ರಾತ್ರಿ ಲ|ದೇವದಾಸ್ ಕಾಪಿಕಡ್ ರಚಿಸಿ ನಿರ್ದೇಶಿಸಿರುವ ಪುಷ್ಪಕ್ಕನ ವಿಮಾನ ತುಳು ಹಾಸ್ಯಮಯ ನಾಟಕ, ಮಾ.18ರಂದು ರಾತ್ರಿ ಹಿನ್ನಲೆ ಗಾಯಕ ಸುಮಂತ್ ವಸಿಷ್ಠ ಮೈಸೂರು ತಂಡದಿಂದ ಸಂಗೀತ ರಸಮಂಜರಿ, ಮಾ.19ರಂದು ರಾತ್ರಿ ಸಂಗಮ ಕಲಾವಿದರು ಉಜಿರೆ ಇವರಿಂದ ಗಿರೀಶ್ ಹೊಳ್ಳ ನಿರ್ದೇಶನದ ಪಿರಬನ್ನಗ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.