ಲಾಯಿಲ ಬಜಕ್ರೆಸಾಲ್ ಡಾ. ಕೃಪಾ ಫಡಕೆ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಬೆಳ್ತಂಗಡಿ: ಮೂಲತಃ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಬಜಕ್ರೆಸಾಲ್ ನಿವಾಸಿ ಗಂಗಾಧರ ವಿ ಫಡಕೆ ಮತ್ತು ಉಮಾ ಜಿ ಫಡಕೆ ದಂಪತಿ ಪುತ್ರಿ ಡಾ. ಕೃಪಾ ಫಡಕೆ ಅವರಿಗೆ ರಾಜ್ಯ ಸರಕಾರದಿಂದ ಕೊಡಮಾಡುವ ಈ ವರ್ಷದ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲಾ ಅವರು ನಗದು ಸಹಿತ ಇರುವ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿದ್ದಾರೆ.
ಪ್ರಸ್ತುತ ಮೈಸೂರಿನಲ್ಲಿ ನೆಲೆಸಿ ನೃತ್ಯಗಿರಿ ಭತರ ನಾಟ್ಯ ಶಾಲೆ ನಡೆಸುತ್ತಿರುವ ಡಾ. ಕೃಪಾ ಫಡಕೆ ಅವರು ಪ್ರಾರಂಭದಲ್ಲಿ ನೃತ್ಯಾಭ್ಯಾಸ ಆರಂಭಿಸಿರುವುದು ಬೆಳ್ತಂಗಡಿಯ ಹಿರಿಯ ನೃತ್ಯಗುರು, ನೃತ್ಯನಿಕೇತನದ ಕಮಲಾಕ್ಷ ಆಚಾರ್ ಅವರಿಂದ.
ಮೈಸೂರು ವಿವಿ ಯಿಂದ ಮಾಸ್ಟರ್ ಮ್ಯೂಸಿಕ್ ಪದವಿ, ಮೈಸೂರು ವಿವಿ ಯಿಂದ ಸಂಸ್ಕೃತದಲ್ಲಿ ಎಂ. ಎ ಪದವಿ, ಭರತನಾಟ್ಯದಲ್ಲಿ ವಿದ್ವತ್, ಗಾಯನದಲ್ಲಿ ಜೂನಿಯರ್ ಶಿಕ್ಷಣ ಪೂರೈಸಿದ್ದಾರೆ.
ಕಳೆದ ಬಾರಿ ಅವರು ಸಂತ ನಾರಾಯಣ ತೀರ್ಥರ ಕೃಷ್ಣ ಲೀಲಾ ತರಂಗಿಣಿ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್‌ಡಿ ಕೂಡ ಲಭಿಸಿದೆ. ಅವರು ಈಗಾಗಲೇ ಭಾರತ ಸರಕಾರದ ಮಿನಿಸ್ಟ್ರಿ ಆಫ್ ಕಲ್ಚರ್, ಸಿಸಿಆರ್‌ಟಿ ಸ್ಕಾಲರ್‌ಶಿಪ್ ತಜ್ಞರ ಸಮಿತಿ, ನವದಹಲಿಯ ಸಂಸ್ಕಾರ ಭಾರತಿ ನೃತ್ಯ ವಿದ್ಯಾ ಪ್ರಮುಖ್, ರಾಜ್ಯ ಸರಕಾರದ ದೇವರಾಜ್ ಅರಸು ಶತಮಾನೋತ್ಸವ ಕಮಿಟಿ ಸದಸ್ಯರಾಗಿ ಸೇರಿದಂತೆ ಪ್ರಮುಖ ರಂಗಳಲ್ಲಿ ಅವಕಾಶ ಪಡೆದು ತೊಡಗಿಸಿಕೊಂಡಿದ್ದಾರೆ.
ಅಪ್ಪಟ ಭಾರತೀಯ ನೃತ್ಯ ಕಲಾಪ್ರಾಕಾರವಾದ ಭರತನಾಟ್ಯ, ಶಾಸ್ತ್ರೀಯ ಜಾನಪದ ನೃತ್ಯವನ್ನು ನಾಸಿಕ್, ದೆಹಲಿ, ಜಯಪುರ, ಆಗ್ರಾ, ಪ್ರಯಾಗ್‌ರಾಜ್, ಉಜ್ಜಯಿನಿ, ಗೋರಖ್‌ಪುರ, ಗ್ವಾಲಿಯಾರ್, ಮುಂಬೈ, ಬೆಂಗಳೂರು, ಕೊಚ್ಚಿನ್, ಮಂಗಳೂರು, ಶೃಂಗೇರಿ, ಹುಬ್ಬಳ್ಳಿ, ಕಾಗಿನೆಲೆ, ಸೇರಿದಂತೆ ಹಲವಾರು ಪ್ರತಿಷ್ಠಿತ ಸ್ಥಳ ಮತ್ತು ವೇದಿಕೆಗಳಲ್ಲಿ ಪ್ರಚಾರಪಡಿಸುವ ಕಾರ್ಯ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.