ಮಾ. 16-17: ಉಜಿರೆ ಅರಿಪ್ಪಾಡಿ ಮಠದಲ್ಲಿ ಗುರುವಂದನೆ-ಸನ್ಮಾನ-ಯಕ್ಷಗಾನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಉಜಿರೆ ಅರಿಪ್ಪಾಡಿ ಮಠ ಮತ್ತು ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಮಾ. 16-17 ರಂದು ಶ್ರೀ ಮಠದಲ್ಲಿ ಗುರುವಂದನೆ-ಸನ್ಮಾನ-ಯಕ್ಷಗಾನ ಕಾರ್ಯಕ್ರಮ ನಡೆಯಲಿದ್ದು, ಆ ಹಿನ್ನಲೆಯಲ್ಲಿ ಹಿರಿಯ ಯತಿಶ್ರೇಷ್ಠರಾದ ಪೇಜಾವರ ಶ್ರೀಗಳ ಬಳಿಕ ಇದೇ ಮೊದಲ ಬಾರಿಗೆ ಎಡನೀರು ಸಂಸ್ಥಾನದ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಮಠಕ್ಕೆ ಚಿತ್ತೈಸಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ, ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ಟ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾ. 16 ರಂದು ಕೃಷ್ಣ ಸಂಧಾನ ಪ್ರಸಂಗ ತಾಳಮದ್ದಳೆ ನಡೆಯಲಿದ್ದು, ಇದರಲ್ಲಿ ಏಕ ಕಾಲದಲ್ಲಿ ತ್ರಿವಿಧ ಪಾತ್ರಾನುಸಂಧಾನವಿದ್ದು ತತ್ವವಾದೀ, ನೀತಿವಾದೀ, ಛಲವಾದೀ ಹೀಗೆ ಕೌರವನ ಮೂರು ಪಾತ್ರಗಳು ಎದುರಾಗಿ ಒಂದು ಕೃಷ್ಣ ಪಾತ್ರವಿರುತ್ತದೆ. ತಾಳಮದ್ದಳೆ ಇತಿಹಾಸದಲ್ಲಿ ಇದೊಂದು ವಿಶಿಷ್ಟ ಪ್ರಯೋಗವಾಗಿದೆ. ಹೆಸರಾಂತ ಕಲಾವಿದರು ಇದರಲ್ಲಿ ಭಾಗಿಯಾಗಲಿದ್ದಾರೆ. ಮಾ. 17 ರಂದು ತೆಂಕು-ಬಡಗು ಯಕ್ಷಗಾಯನ ನಡೆಯಲಿದ್ದು, ಪಟ್ಲ ಸತೀಶ್ ಶೆಟ್ಟಿ, ಕಾವ್ಯಾ ಅಜೇರು, ಜನ್ಸಾಲೆ ರಾಘವೇಂದ್ರ ಆಚಾರ್ ಮೊದಲಾದವರ ಹಾಡುಗಾರಿಗೆ ಇದೆ. ಹಿಮ್ಮೇಳನವಾದನದಲ್ಲೂ ಪ್ರಬುದ್ಧ ಕಲಾವಿದರು ಕೈಯ್ಯಾಡಿಸಲಿದ್ದಾರೆ. ಕರಾವಳಿಯ ನಾಟ್ಯ ಮಯೂರಿ ಖ್ಯಾತಿಯ ರಂಜಿತಾ ಎಲ್ಲೂರು ಬಳಗದವರು ಯಕ್ಷನೃತ್ಯ ನಡೆಸಿಕೊಡಲಿದ್ದಾರೆ.
ಮಾ. 18 ರಂದು ಎಡನೀರು ಶ್ರೀಗಳಿಂದ ಅರಿಪ್ಪಾಡಿ ಸಭಾಂಗಣಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಮುಂದಕ್ಕೆ ಈ ಸಭಾಂಗಣವನ್ನು ಸಂಘ ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ಉಚಿತವಾಗಿ ನೀಡುವ ಉದ್ದೇಶವಿದೆ. ಅಂದು ಮುಂಡಾಜೆ ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಕ್ಕೆ 15 ಕಪಾಟುಗಳನ್ನು ಶ್ರೀಗಳ ಮೂಲಕ ಹಸ್ತಾಂತರಿಸುವ ಕಾರ್ಯವೂ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಅರಿಪ್ಪಾಡಿ ಮಠದ ವಿಶ್ವಸ್ಥ ಎ ಬಾಲಕೃಷ್ಣ ಅರಿಪ್ಪಾಡಿತ್ತಾಯ, ಸಂಘಟಕ ಕೆ ಮೋಹನ ಶೆಟ್ಟಿಗಾರ್ ಮತ್ತು ಕೆ ಸುಬ್ರಾಯ ಶೆಣೈ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ಕಲಾಪೋಷಕ, ಬೆಂಗಳೂರು ಬಿಡಿಎ ಆಯುಕ್ತ ಡಾ.ಟಿ ಶ್ಯಾಮ ಭಟ್ಟ, ಡಿ ಸುರೇಂದ್ರ ಕುಮಾರ್ ಅವರಿಗೆ ನಾಗರಿಕ ಸನ್ಮಾನ ನಡೆಸಲಾಗುವುದು. ವಿಜಯರಾಘವ ಪಡುವೆಟ್ನಾಯ, ಡಾ. ಎಂ ಮೋಹನ ಆಳ್ವ, ಪ್ರೋ. ಎಸ್ ಪ್ರಭಾಕರ್, ಡಿ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಸಹಿತ ಅಗ್ರಮಾನ್ಯ ಗಣ್ಯರುಗಳು ಭಾಗಿಯಾಗಲಿದ್ದಾರೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.