ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೆ

Advt_NewsUnder_1
Advt_NewsUnder_1
Advt_NewsUnder_1

ಪೆರಿಂಜೆ: ಇಲ್ಲಿಯ ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವವು ಮಾರೂರು ಖಂಡಿಗ ರಾಮದಾಸ ಅಸ್ರಣ್ಣರ ನೇತೃತ್ವದಲ್ಲಿ ವಿಧ್ಯುಕ್ತವಾಗಿ ಮಾ.14 ರಿಂದ 19 ರವರೆಗೆ ಜರುಗಲಿರುವುದು.
ಮಾ.14 ರಂದು ಮದ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ ನಡೆದು, ರಾತ್ರಿ ಪಡ್ಯೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿದು, ಪಡ್ಯಾರಬೆಟ್ಟಕ್ಕೆ ಆಗಮಿಸಿ, ಧ್ವಜಾರೋಹಣ, ಬಲಿ, ಚೆಂಡು ನಡೆಯಲಿದೆ.
ಮಾ.15 ರಂದು ಭೂತಬಲಿ, ಉತ್ಸವ ನಡೆದು, ಮಾ.16 ರಂದು ಅಂಬೊಡಿ, ಬಲಿ, ಉತ್ಸವ, ಹೂವಿನ ಪೂಜೆ, ರಥಾರೋಹಣ ನಡೆಯಲಿದೆ. ಮಾ.17 ರಂದು ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಜರುಗಲಿರುವುದು.
ಮಾ.18 ರಂದು ಧ್ವಜಾವರೋಹಣ, ಸಂಪ್ರೋಕ್ಷಣೆ ಪಡ್ಡ್ಯೋಡಿಗುತ್ತಿಗೆ ಭಂಡಾರ ಹಿಂದಿರುಗುವುದು. ಮಾ.19 ರಂದು ರಾತ್ರಿ ಧಾರ್ಮಿಕ ಕಾರ್ಯಕ್ರಮ ಹಾಗೂ ಖ್ಯಾತ ಗಾಯಕ ಅಜಯ್ ವಾರಿಯರ್ ಮತ್ತು ತಂಡದವರಿಂದ ಭಕ್ತಿ-ಭಾವ-ಜನಪದ ಗೀತೆಗಳ ನಾದ -ಸಂಗಮ ಸಾಂಸ್ಕೃತಿಕ ಕಲಾಪಗಳು ನಡೆದು, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ ಜರುಗಲಿರುವುದು.
ಭಕ್ತಾದಿಗಳು ಈ ಪುಣ್ಯಪ್ರದ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಅನುವಂಶೀಯ ಆಡಳಿತದಾರ ಎ.ಜೀವಂಧರ ಕುಮಾರ್ ಪಡ್ಡ್ಯೋಡಿಗುತ್ತು ಇವರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.