ಮುಂಡಾಜೆ-ವಿದ್ಯಾರ್ಥಿಗಳಿಂದ ದೀಪ ಪ್ರದಾನ ಕಾರ್ಯಕ್ರಮ

ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧೀನಕ್ಕೊಳಪಟ್ಟ ಮಂಡಾಜೆ ವಿದ್ಯಾ ಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಿಂದ ದೀಪ ಪ್ರದಾನ (ಬೀಳ್ಕೊಡುಗೆ ) ಕಾರ್ಯಕ್ರಮ ಮಾ. 8ರಂದು ನಡೆಯಿತು.

ಅಧ್ಯಕ್ಷತೆಯನ್ನು ಸ್ಥಾನೀಯ ಸಮಿತಿ ಅಧ್ಯಕ್ಷ ಶ್ರೀನಿವಾಸ ರಾವ್ ಕಲ್ಮಂಜ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಗ್ರಾಮೀಣ ಶಿಕ್ಷಣ ಸಂಸ್ಥೆಗಳ ಸಂಯೋಜಕ ವೆಂಕಟ್ರಮಣ ರಾವ್ ವಿದ್ಯಾರ್ಥಿಗಳಿಗೆ ಹಿತವಚನ ನುಡಿದು ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಚಾಲಕ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ನಾರಾಯಣ ಗೌಡ ಕೊಳಂಬೆ, ಸದಸ್ಯರುಗಳಾದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚೆನ್ನಕೇಶವ ಅರಸ ಮಜಲು, ಪಿಯು ಕಾಲೇಜು ಪ್ರಾಚಾರ್ಯೆ ಜಾಲಿ ಡಿ’ಸೋಜಾ, ಮಾತಾಜಿ ಚಂದ್ರಮತಿ ಉಪಸ್ಥಿತರಿದ್ದು ಶುಭಹರಸಿದರು.

ಕೃಪಾ ಡಿ ಮತ್ತು ಮುನಿಷಾ ನಿರೂಪಿಸಿದ ಸಭೆಗೆ ಧನ್ಯಾ ಪಿ, ಜನಿತ್,ಪ್ರೀತಾ ಮತ್ತು ಶ್ರಾವ್ಯಾ ಪ್ರಾರ್ಥಿಸಿ, ರಾಶಿಂ ಸ್ವಾಗತಿಸಿ, ಸಿಂಚನಾ ಜೆ ಮತ್ತು ಸಿಂಚನಾ ಶೆಟ್ಟಿ ವಂದಿಸಿದರು. ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಧ್ವನಿವರ್ಧಕ,, ಆಮ್ಪ್ಲಾಯರ್ ಹಾಗೂ ಮೈಕ್ ಸ್ಟಾಂಡ್ ಹಸ್ತಾಂತರವಾಯಿತು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.