HomePage_Banner_
HomePage_Banner_

ಪಿಲಿಗೂಡಿನಲ್ಲಿ ರಕ್ತದಾನ ಶಿಬಿರ

ಕಣಿಯೂರು: ಸೇವಾಭಾರತಿ ಬೆಳ್ತಂಗಡಿ ಸಂಯೋಜನೆಯೊಂದಿಗೆ ಪಿಲಿಗೂಡು ದಿ| ಮಧುಸೂದನ ಮುರತ್ತಕೋಡಿ ಇವರ 4ನೇ ವರ್ಷದ ಸ್ಮರಣಾರ್ಥವಾಗಿ ದ.ಕ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮತ್ತು ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಕಾರದಲ್ಲಿ ಪಿಲಿಗೂಡು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಪದ್ಮುಂಜದ ಶ್ರೀ ಕ್ಲಿನಿಕ್‌ನ ಡಾ|| ಎಂ.ವಿ ಭಟ್ ಉದ್ಘಾಟಿಸಿದರು. ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ  ಸುನೀಲ್  ಸಾಲ್ಯಾನ್ ಬೆಂಗಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಣಿಯೂರು  ಕ್ಷೇತ್ರದ ತಾ.ಪಂ.ಸದಸ್ಯೆ ಅಮಿತಾ ಕುಶಾಲಪ್ಪ ಗೌಡ, ಪಿಲಿಗೂಡು ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಜಗದೀಶ್ ಪ್ರಸಾದ್, ಬೆಳ್ತಂಗಡಿ ಸೇವಾಭಾರತಿ ಅಧ್ಯಕ್ಷ  ಕೆ.ವಿನಾಯಕ ರಾವ್,  ಶ್ರೀ ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆಯ ಕಣಿಯೂರು ವಲಯದ  ಮೇಲ್ವಿಚಾರಕ ಮಾಧವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ರಕ್ತದಾನ ಶಿಬಿರದಲ್ಲಿ40 ಯುನಿಟ್ ರಕ್ತ ಸಂಗ್ರಹಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.