ನಿಡಿಗಲ್ ಶ್ರೀ ಮಹಾಗಣಪತಿ ದೇವಸ್ಥಾನ ರೂ.90 ಲಕ್ಷ ವೆಚ್ಚದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ನಿಡಿಗಲ್: ಪವಿತ್ರ ನದಿ ನೇತ್ರಾವತಿಯ ದಂಡೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಪುರಾತನವಾದ ಅನಾದಿಕಾಲಂದಿದಲೂ ಸಾರ್ವಜನಿಕ ಭಕ್ತರು ಆರಾಧಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಗವತ್‌ ಭಕ್ತರು ಸಂಕಲ್ಪ ಮಾಡಿದ್ದಾರೆ. ಇದರನ್ವಯ ಮಾ8ರಂದು ಎಡಪದವು ಶ್ರೀ ವೆಂಕಟೇಶ ತಂತ್ರಿಗಳ ಉಪಸ್ಥಿತಿಯಲ್ಲಿ ಉಜಿರೆಯ ಸಿವಿಲ್‌ಗುತ್ತಿಗೆದಾರ ರಾಮ ಕಾಮತ್‌ರವರು ನೂತನ ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಊರ-ಪರವೂರ ಗಣ್ಯರು, ಊರವರು, ಭಕ್ತರು, ಪ್ರಭು ಕುಟುಂಬಸ್ಥರು ಉಪಸ್ಥಿತರಿದ್ದರು.

ಭಕ್ತರ ನಂಬಿಕೆಯ ಕ್ಷೇತ್ರ: ಶ್ರೀ ದೇವಳದಲ್ಲಿ ತ್ರಿಕಾಲ ಪೂಜೆ, ಸಂಕಷ್ಟ ಚತುರ್ಥಿ ಪೂಜೆ, ನವರಾತ್ರಿಯ ದಿನಗಳಲ್ಲಿ ವಿಶೇಷ ಪೂಜೆ, ಶ್ರೀ ಗಣೇಶ ಚತುರ್ಥಿ, ಯುಗಾದಿ, ದೀಪಾವಳಿ, ನಾಗರಪಂಚಮಿ, ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ, ದೀಪೋತ್ಸವ ಅಲ್ಲದೆ ಶ್ರೀ ಆಶ್ವಥ್ಥ ನಾರಾಯಣ, ನಾಗದೇವರು, ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಶ್ರೀ ದೇವರಲ್ಲಿ ದೈನ್ಯಭಾವದಿಂದ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕೇಳಿಕೊಂಡಲ್ಲಿ ಶ್ರೀ ವಿನಾಯಕನು ತಮ್ಮ ಇಚ್ಚೆಯಂತೆ ಅನುಗ್ರ ಕೊಡುವನು. ನೂತನ ವಧುವರರು, ಮದುವೆ ಆಗದೇ ಇದ್ದವರು, ಮಕ್ಕಳಾಗದೇ ಇದ್ದವರು, ವಿದ್ಯಾರ್ಥಿಗಳು, ಉದ್ಯೋಗರಹಿತರು, ಅಸೌಖ್ಯದಿಂದ ತೊಂದರೆ ಅನುಭವಿಸುವವರು ಇಲ್ಲಿ ಪ್ರಾರ್ಥಿಸಿದರೆ ಗಣಪತಿಯು ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

ರೂ.90 ಲಕ್ಷದಲ್ಲಿ ಜೀರ್ಣೋದ್ಧಾರ
ಶ್ರೀ ಮಹಾಗಣಪತಿಗೆ ನೂತನ ಗರ್ಭಗುಡಿ, ತಾಮ್ರದ ಮೇಲ್ ಹೊದಿಕೆ, ಸುತ್ತು ಪೌಳಿ, ರಕ್ತೇಶ್ವರಿ ಗುಡಿ, ತೀರ್ಥಬಾವಿ, ಅಶ್ವಥ್ಥ ಕಟ್ಟೆ, ನಾಗ ಸನ್ನಿಧಿ, ದುರಸ್ತಿ, ಪುನರ್ ಪ್ರತಿಷ್ಠೆ ಹೀಗೆ ಹಲವಾರು ಕಾರ್ಯಕ್ರಮಗಳಿಗೆ ಸರಿಸುಮಾರು ರೂ.90 ಲಕ್ಷ ವೆಚ್ಚದ ನೂತನ ದೇವಾಲಯ ನಿರ್ಮಾಣಗೊಳ್ಳಲಿದೆ. ಈ ಕ್ಷೇತ್ರದ ಜೀರ್ಣೋದ್ಧಾರ ಬಗ್ಗೆ ತಾಂಬೂಲ ಪ್ರಶ್ನೆ, ದೇವ ಪ್ರಶ್ನೆ ಇಟ್ಟಾಗ ಹತ್ತು ಹಲವು ಪ್ರಾಮುಖ್ಯ ವಿಚಾರ ತಿಳಿದು ಬಂದಿದ್ದು, ವೈದಿಕರು ಹೇಳಿದಂತೆ ಎಲ್ಲಾ ಪ್ರಾಯಶ್ಚಿತ್ತ, ಪರಿಹಾರ ವಿಧಿಗಳನ್ನು ಚಾಚೂ ತಪ್ಪದೆ ಸಮಿತಿಯ ಕೈಗೊಂಡಿದೆ ಎಂದು ಪ್ರಭು ಕುಟುಂಬಸ್ಥರು ತಿಳಿಸಿದ್ದಾರೆ.

ಶ್ರೀ  ಕ್ಷೇತ್ರದ ಜೀರ್ಣೋದ್ಧಾರ ಬಗ್ಗೆ ಧನಸಹಾಯವನ್ನು ಮಾಡಲಿಚ್ಛಿಸುವ  ದಾನಿಗಳು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸಿಂಡಿಕೇಟ್ ಬ್ಯಾಂಕ್  ಉಜಿರೆ  ಖಾತೆ ಸಂಖ್ಯೆ 02532200029097 (IFSC CODE SYNB0000253) ಕ್ಕೆ ದೇಣಿಗೆ ಕಳುಹಿಸಬಹುದು . ಆನ್ ಲೈನ್  ಮೂಲಕ  ಬ್ಯಾಂಕ್ ಖಾತೆಗೆ ನೇರವಾಗಿ  ಹಣ ಕಳುಹಿಸುವವರು  ತಮ್ಮ ಹೆಸರು, ವಿಳಾಸ  ಮೊಬೈಲ್  ಸಂಖ್ಯೆಯನ್ನು  ವಾಟ್ಸಾಪ್ ಸಂಖ್ಯೆ 8197971952(ಪಿ.ನಾಗೇಶ ಪ್ರಭು) ಕ್ಕೆ ಕಳುಹಿಸಬೇಕಾಗಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.