ಬಂಗಾಡಿ: ಸೂರ್ಯ-ಚಂದ್ರ ಜೋಡುಕೆರೆ ಕಂಬಳಕ್ಕೆ ವೈಭವದ ಚಾಲನೆ

ಕೊಲ್ಲಿ: ಇಲ್ಲಿಯ ಬಂಗಾಡಿಯಲ್ಲಿ 22ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕೆರೆ ಕಂಬಳಉದ್ಘಾಟನಾ ಸಮಾರಂಭವು ಮಾ.9 ರಂದು ಜರುಗಿತು. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಯು.ವಿಜಯ ರಾಘವ ಪಡ್ವೆಟ್ನಾಯರವರು ಉದ್ಘಾಟನೆಯನ್ನು ನೆರವೇರಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಂಜನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಗುತ್ತಿಗೆದಾರ ಸತೀಶ್ ಕಾಮತ್, ಬೆಳ್ಳೂರುಬೈಲು ನೇತ್ರಾವತಿ-ಶರಾವತಿ ಕಂಬಳ ಸಮಿತಿ ಅಧ್ಯಕ್ಷ ಕೃಷ್ಣ ಗೌಡ ಡೆಮ್ಮೆಜಾಲು, ತಾ.ಪಂ ಸದಸ್ಯ ಪ್ರವೀಣ ಗೌಡ, ಕಂಬಳ ಸಮಿತಿ ಗೌರವಾಧ್ಯಕ್ಷ ರಂಜನ್ ಜಿ ಗೌಡ, ಕಾರ್ಯದರ್ಶಿ ಕಿಶೋರ್ ವಳಂಬ್ರ, ಕೋಶಾಧಿಕಾರಿ ಭರತ್ ಕುಮಾರ್, ಸ್ವಾಗತ ಸಮಿತಿ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ನ.ಪಂ. ಮುಖ್ಯಾಧಿಕಾರಿ ಸುಧಾಕರ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಕರ ಶೆಟ್ಟಿ, ಪ್ರಮುಖರಾದ ಪೂವಪ್ಪ ಗೌಡ, ರಾಜಗೋಪಾಲ ಭಟ್ಮ, ಉದ್ಯಮಿ ಬದ್ರುದ್ದೀನ್ ಕಾಜೂರು, ಆನಂದ ಗೌಡ ಮೈರ್ನೋಡಿ ,  ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.