ಚಾರ್ಮಾಡಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜನಜಾಗೃತಿ ಜಾಥಾ

ಚಾರ್ಮಾಡಿ : ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಮತ್ತು ಸೀರೊ ಮಲಬಾರ್ ಮಾತೃವೇದಿ ತೋಟತ್ತಾಡಿ ವಲಯ ಇವರ ಜಂಟಿ ನೇತೃತ್ವದಲ್ಲಿ ಗ್ರಾ.ಪಂ ಚಾರ್ಮಾಡಿ, ಕರ್ನಾಟಕ ಮಾನವ ಹಕ್ಕುಗಳ ತಾಲೂಕು ಸಮಿತಿ, ಸೈಂಟ್ ತೋಮಸ್ ಕಾಲೇಜು ಬೆಳ್ತಂಗಡಿ, ಸುರಕ್ಷಾ ಕಾರ್ಯಕಾರಿ ಸಮಿತಿ ನೆರಿಯ ಇದರ ಸಹಕಾರದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಜನಜಾಗೃತಿ ಜಾಥಾ ಮತ್ತು ಸಮಾವೇಶ ಮಾ.8 ರಂದು ಚಾರ್ಮಾಡಿ ಗ್ರಾ.ಪಂ ವಠಾರದಲ್ಲಿ ಜರುಗಿತು.
ಜಾಥಾದ ಉದ್ಘಾಟನೆಯನ್ನು ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶೈಲಜಾ ನೆರವೇರಿಸಿದರು. ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಎಲಿಯಾಮ್ಮ ತೋಮಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಕ್ಷೇತ್ರದ ಜಿ.ಪಂ ಸದಸ್ಯೆ ನಮಿತಾ ಕೆ ನೆರವೇರಿಸಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಲಾರೆನ್ಸ್ ಮುಕ್ಕುಝಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಗೌರವಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ, ನೆರಿಯ ಸುರಕ್ಷಾ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಪೂರ್ಣಿಮಾ, ಮಾತೃವೇದಿ ಬೆಳ್ತಂಗಡಿ ಧರ್ಮಪ್ರಾಂತ್ಯದ ನಿರ್ದೇಶಕ ವಂ.ಸ್ವಾ| ತೋಮಸ್ ಪುದಿಯೆರ, ಬೆಳ್ತಂಗಡಿ ಡಿಕೆಆರ್‌ಡಿಎಸ್ ನಿರ್ದೇಶಕ ವಂ.ಸ್ವಾ| ಜೋಸ್ ಆಯಾಂಕುಡಿ ಗೌರವ ಉಪಸ್ಥಿತರಿದ್ದರು.
ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ವಂದನಾ ಎಂ. ಇರ್ವತ್ರಾಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್ ಪ್ರಕಾಶ್ ಶೆಟ್ಟಿ ನೊಚ್ಚ ಹಾಗೂ ಗಂಡಿಬಾಗಿಲು ಉದಯ ಮಹಾಸಂಘದ ಕಾರ್ಯದರ್ಶಿ ಶ್ರೀಮತಿ ಮರಿಯಮ್ಮ ಇವರನ್ನು ಸನ್ಮಾನಿಸಿ ಗೌರವಿಸಿಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.