ಮಾಚಾರು ಪುತ್ತುಬಾವಾಕ (ಮುಹಮ್ಮದ್) ನಿಧನ

ಉಜಿರೆ: ಇಲ್ಲಿನ ಮಾಚಾರು ಜಮಾಅತಿನ ಹಿರಿಯ ವ್ಯಕ್ತಿಯೂ, ಮಸೀದಿಯ ಗೌರವಾಧ್ಯಕ್ಷ ಹಾಗೂ ಕೋಶಾಧಿಕಾರಿಯಾಗಿಯೂ ಸಹಿತ ಹಲವಾರು ಹುದ್ದೆಗಳಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪುತ್ತುಬಾವಾಕ ಯಾನೆ ಮುಹಮ್ಮದ್ (75 ವ.) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಮಾಚಾರು ಜಮಾಅತಿನ ಅದ್ಯಕ್ಷರು, ಉಜಿರೆ ಗ್ರಾಮ ಪಂಚಾಯತ್ ಸದಸ್ಯರು, ಸಾಮಾಜಿಕ ಮುಂದಾಳುವಾಗಿರುವ ಬಿ.ಎಂ ಇಲ್ಯಾಸ್ ಅವರ ಮಾವನಾದ ಇವರು 6 ಗಂಡು, 4ಹೆಣ್ಣು ಮಕ್ಕಳು ಹಾಗು ಕುಟುಂಬವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಶಾಸಕ ವಸಂತ ಬಂಗೇರ, ಉಜಿರೆ ಸಹಕಾರಿ ಸಂಘದ ಅಧ್ಯಕ್ಷ ಇಚ್ಛಿಲ ಸುಂದರ ಗೌಡ, ಎಸ್‌ಎಮ್‌ಎ ಬೆಳ್ತಂಗಡಿ ಝೋನ್ ಅಧ್ಯಕ್ಷ ಎಸ್. ಎಮ್ ಕೋಯ ತಂಙಳ್ ಉಜಿರೆ, ಸಮಾಜಸೇವಕ ಅಬ್ಬೋನು ಮದ್ದಡ್ಕ, ಉಜಿರೆ ಗ್ರಾ. ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಉಪಾಧ್ಯಕ್ಷೆ ವಿನುತಾ ರಜತ ಗೌಡ, ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಬೆಳಾಲು ಗ್ರಾ. ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್ ಸಹಿತ ಹಲವಾರು ಪ್ರಮುಖ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.