ಮಾ.12ರಿಂದ ಪೆರಿಯಡ್ಕ ಶ್ರೀ ಒಡ್ಯೇಶ್ವರ-ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪೆರಿಯಡ್ಕ: ಚಿಬಿದ್ರೆ ಗ್ರಾಮದ ಪೆರಿಯಡ್ಕ ಶ್ರೀ ಒಡ್ಯೇಶ್ವರ-ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಶ್ರೀ ಸಪರಿವಾರ ಒಡ್ಯೇಶ್ವರ ಉಳ್ಳಾಲ್ತಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಮಾ.12ರಿಂದ ಮಾ.14ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.
ಮಾ.12ರಂದು ಸಂಜೆ ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಶಯ್ಯಾಧಿವಾಸ ರಕ್ಷೆ ಮೊದಲಾದ ಧಾರ್ಮಿಕ ವಿಧಿ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉಜರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಶ್ರೀ ಧ.ಗ್ರಾ.ಯೋಜನೆಯ ಕಾರ್ಯನಿರ್ವಹಕ ನಿರ್ದೇಶಕ ಡಾ. ಎಲ್.ಹೆಚ್ ಮಂಜುನಾಥ್, ಕ್ಷೇತ್ರದ ಆಡಳಿತ ಮೊಕ್ತೇಸರ ರಾಮಣ್ಣ ಗೌಡ ಮಾಕಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಘವ ಗೌಡ ಕುಡುಮಡ್ಕ ಭಾಗವಹಿಸಲಿದ್ದಾರೆ.
ರಾತ್ರಿ ೧೦10ಣಿಕೆ ಸಮರ್ಪಣೆ, ಬಳಿಕ ಪ್ರತಿಷ್ಠೆ ಕಲಶಾಭಿಷೇಕ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫ಕ್ಕೆ ದೈವಗಳ ಭಂಡಾರ ತೆಗೆಯುವುದು, ಸಾರ್ವಜನಿಕ ಅನ್ನಸಂತರ್ಪಣೆ, ಭಂಡಾರ ಮನೆಯಿಂದ ಭಂಡಾರ ಹೊರಡುವುದು, ರಾತ್ರಿ 11ರಿಂದ ಶ್ರೀ ಒಡ್ಯೇಶ್ವರ ಹಾಗೂ ಉಳ್ಳಾಲ್ತಿ ಅಮ್ಮನವರ ಉತ್ಸವ, ಶ್ರೀ ದೇವರ ಅವಭೃತೋತ್ಸವ ನಡೆಯಲಿದೆ.
ಮಾ.೧೪ರಂದು ಸಂಜೆ ಕಲ್ಲುರ್ಟಿ, ಪಂಜುರ್ಲಿ, ಪಿಲಿಚಾಮುಂಡಿ, ಕೊರಗ, ಮಲೆದೈವಗಳಿಗೆ ನರ್ತನ ಸೇವೆ, ಬಳಿಕ ಅನ್ನಸಂತರ್ಪಣೆ, ರಾತ್ರಿ 11ರಿಂದ ಶ್ರೀ ಉಳ್ಳಾಯ-ಉಳ್ಳಾಲ್ತಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.